Connect with us

    LATEST NEWS

    ಸದ್ಯಕ್ಕೆ ಉಡುಪಿ ಜಿಲ್ಲೆಗೆ ಬರಲು ಹೋಗಲು ಸಂಪೂರ್ಣ ನಿರ್ಬಂಧ – ಜಿಲ್ಲಾಧಿಕಾರಿ

    ಸದ್ಯಕ್ಕೆ ಉಡುಪಿ ಜಿಲ್ಲೆಗೆ ಬರಲು ಹೋಗಲು ಸಂಪೂರ್ಣ ನಿರ್ಬಂಧ – ಜಿಲ್ಲಾಧಿಕಾರಿ

    ಉಡುಪಿ ಎಪ್ರಿಲ್ 10: ಕೊರೊನಾ ಉಡುಪಿ ಜಿಲ್ಲೆಗೆ ಬರದಂತೆ ತಡೆಯುವ ನಿಟ್ಟಿನಲ್ಲಿ ಸದ್ಯದ ಮಟ್ಟಿದೆ ಉಡುಪಿ ಜಿಲ್ಲೆಯಿಂದ ಯಾರನ್ನೂ ಹೊರಗಡೆ ಬಿಡಲಾಗುವುದಿಲ್ಲ, ಅಲ್ಲದೆ ಯಾರಿಗೂ ಜಿಲ್ಲೆ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

    ಈ ಕುರಿತಂತೆ ಮಾಹಿತಿ ನೀಡಿದ ಅವರು ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ಹತೋಟಿಗೆ ಬಂದಿದ್ದು, ಜಿಲ್ಲೆಯಲ್ಲಿ ಪತ್ತೆಯಾದ ಮೂರು ಕೊರೊನಾ ಸೊಂಕಿತರು ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣ ಗುಣಮುಖರಾಗುತ್ತಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

    ಕೊರೊನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನು ಗುರುತಿಸಿ ಕ್ವಾರೆಂಟೈನ್ ನಲ್ಲಿಡಲಾಗಿತ್ತು ಮತ್ತು ಅವರೆಲ್ಲರ ಗಂಟಲ ದ್ರವದ ಮಾದರಿ ತಪಾಸಣಾ ವರದಿ ನೆಗೆಟಿವ್ ಬಂದಿರುತ್ತದೆ.

    ಸದ್ಯದ ಮಟ್ಟಿಗೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಇದೆ. ಈ ಕಾರಣದಿಂದ ಮುಂಬರುವ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲೆಯಿಂದ ಯಾರನ್ನೂ ಹೊರಗಡೆ ಬಿಡಲಾಗುವುದಿಲ್ಲ ಮತ್ತು ಈ ಜಿಲ್ಲೆಗೆ ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ವ್ಯಕ್ತಿಗಳು ಬರುವುದಕ್ಕೆ ಸದ್ಯಕ್ಕೆ ಅವಕಾಶ ಇರುವುದಿಲ್ಲ.

    ಈ ನಿಯಮವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಸಹಕಾರವನ್ನು ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಜಿ. ಅವರು ವಿನಂತಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply