Connect with us

    FILM

    ಟಿಎಂಸಿ ಸಂಸದೆ ನುಸ್ರತ್ ಜಹಾನ್ ಮಗುವಿನ ತಂದೆ ಯಾರು ಎಂಬ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ

    ಕೊಲ್ಕತ್ತಾ : ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ಮಗುವಿನ ತಂದೆ ಯಾರು? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ದೊರೆತಿದೆ. ಮಗುವಿನ ತಾಯಿಯಾದರೂ ತಂದೆ ಯಾರೆಂಬ ಪ್ರಶ್ನೆಗೆ ಹಾರಿಕೆ ಉತ್ತರ ಕೊಡುತ್ತಿದ್ದ ಸಂಸದೆ ನುಸ್ರತ್ ಜಹಾನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾದ ನುಸ್ರತ್ ಜಹಾನ್ ಮಗುವಿನ ಜನನ ಮಾಹಿತಿಯ ಆಧಾರದ ಮೇಲೆ ಅನೇಕ ಸುದ್ದಿ ಸಂಸ್ಥೆಗಳು ಸುದ್ದಿ ಪ್ರಕಟಿಸಿವೆ.


    ನುಸ್ರತ್ ಜಹಾನ್ ಕೋಲ್ಕತ್ತದ ಭಾಗಿರಥಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಕೋಲ್ಕತ್ತ ಮಹಾನಗರ ಪಾಲಿಕೆಯ ದಾಖಲಾತಿಯಲ್ಲಿರುವ ಸುಸ್ರತ್ ಮಗುವಿನ ಜನನದ ಮಾಹಿತಿಯಲ್ಲಿ ಮಗುವಿನ ಹೆಸರು ಯಶಾನ್ ಹಾಗೂ ತಂದೆ ಹೆಸರು ದೇಬಾಸಿಸ್ ದಾಸ್‌ ಗುಪ್ತಾ (ಯಶ್‌ ದಾಸ್‌ ಗುಪ್ತಾ) ಎಂದು ಉಲ್ಲೇಖಿಸಿರುವುದು ತಿಳಿದು ಬಂದಿದೆ. ಸದ್ಯ ನುಸ್ರತ್ ಅವರು ನಟ ಯಶ್ ದಾಸ್‌ಗುಪ್ತಾ ಜೊತೆ ಡೇಟಿಂಗ್‌ನಲ್ಲಿದ್ದಾರೆ.


    ಗರ್ಭಿಣಿಯಾಗಿದ್ದ ವೇಳೆ ನುಸ್ರತ್ ಜೊತೆ ದಾಸಗುಪ್ತಾ ಸಹ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಕಳೆದ ವಾರ ಮಗನ ಜೊತೆ ನುಸ್ರತ್ ಮಹಾನಗರ ಪಾಲಿಕೆಗೆ ತೆರಳಿ ಮಗುವಿನ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರು. ಬುಧವಾರ ಸಂಜೆ ಪಾಲಿಕೆಯ ವೆಬ್‍ಸೈಟ್‍ನಲ್ಲಿ ಪ್ರಮಾಣಪತ್ರ ಪ್ರಕಟವಾಗಿದ್ದು, ಅದರಲ್ಲಿ ತಂದೆಯ ಹೆಸರು ಕೂಡ ಬಹಿರಂಗವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply