Connect with us

    KARNATAKA

    ಗೀತಾ ಗೋವಿಂದಂ ಸಿನೆಮಾ ಸ್ಟೈಲ್ ನಲ್ಲಿ ಬಸ್ ನಲ್ಲಿ ನಿದ್ರಿಸುತ್ತಿದ್ದ ಯುವತಿಗೆ ಕಿಸ್ ಕೊಟ್ಟ ಯುವಕ…!!

    ಬೆಂಗಳೂರು: ಖ್ಯಾತ ತೆಲುಗು ಸಿನೆಮಾ ಗೀತಾ ಗೋವಿಂದಂ ಶೈಲಿಯಲ್ಲೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ ಯುವತಿಯೊಬ್ಬಳಿಗೆ ಸಹ ಪ್ರಯಾಣಿಕನೊಬ್ಬ ಕಿಸ್ ಕೊಟ್ಟು ಪರಾರಿಯಾದ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


    ಬೆಂಗಳೂರಿನಲ್ಲಿ ಆರ್ಕಿಟೆಕ್ಟರ್ ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು, ಕೆ‌ಎಸ್‌ಆರ್‌ಟಿ‌ಸಿ ಎಸಿ ಸ್ಲೀಪರ್ ಬಸ್​ನಲ್ಲಿ ತನ್ನೂರು ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದಳು. ಈ ವೇಳೆ ಯುವತಿ ಸಮೀಪದ ಸೀಟ್​ನಲ್ಲಿದ್ದ ಯುವಕನೋರ್ವ ಗೀತಾ ಗೋವಿಂದಂ ಸಿನಿಮಾ ನೋಡುತ್ತಿದ್ದ. ಬಸ್​ ಟಿ.ದಾಸರಹಳ್ಳಿ ಮತ್ತು ಜಾಲಹಳ್ಳಿ ಕ್ರಾಸ್ ಮಧ್ಯೆ ಬರುತ್ತಿದ್ದಂತೆ ಯುವತಿಗೆ ಕಿಸ್​ ಕೊಟ್ಟು ಇಳಿದು ಹೋಗಿದ್ದಾನೆ.


    ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಸ್ಲೀಪರ್‌ ಎಸಿ ಬಸ್‌ನಲ್ಲಿ ಸೆ.13ರಂದು ಮುಂಜಾನೆ ಐದು ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಬೆಳಗಿನ ಜಾವ ಐದು ಗಂಟೆ ಸಮಯದಲ್ಲಿ ಬಸ್‌ ಟಿ. ದಾಸರಹಳ್ಳಿ- ಜಾಲಹಳ್ಳಿ ಕ್ರಾಸ್‌ ಮಧ್ಯೆ ಸಂಚರಿಸುವಾಗ ಘಟನೆ ನಡೆದಿದೆ. ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆ ಯುವಕ ಯಾರು? ಎಲ್ಲಿಂದ ಪ್ರಯಾಣಿಸಿದ್ದಾನೆ? ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿದ್ದನೇ ಮುಂತಾದ ಆತನ ಬಗೆಗಿನ ವಿವರ ನೀಡುವಂತೆ ಕೆಎಸ್‌ಆರ್‌ಟಿಸಿಗೆ ಪೊಲೀಸರು ಮಾಹಿತಿ ಕೇಳಿದ್ದಾರೆ ಎಂದು ಗೊತ್ತಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply