LATEST NEWS
ಕುಮಾರಧಾರ ನದಿ ನೀರು ಕೊಂಚ ಇಳಿಕೆ ರಾಷ್ಟ್ರೀಯ ಹೆದ್ದಾರಿ 75 ವಾಹನ ಸಂಚಾರ ಪ್ರಾರಂಭ
ಕುಮಾರಧಾರ ನದಿ ನೀರು ಕೊಂಚ ಇಳಿಕೆ ರಾಷ್ಟ್ರೀಯ ಹೆದ್ದಾರಿ 75 ವಾಹನ ಸಂಚಾರ ಪ್ರಾರಂಭ
ಪುತ್ತೂರು ಅಗಸ್ಟ್ 9: ಪಶ್ಚಿಮಘಟ್ಟದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಹಗಿ ಬೆಳ್ತಂಗಡಿ ತಾಲೂಕಿನ ಶಿರಾಡಿ, ಉದನೆ, ನೇಲಡ್ಕ, ಶಿಶಿಲ ಪ್ರದೆಶದಲ್ಲಿ ರಸ್ತೆ, ಮನೆಗಳು ಜಲಾವೃತವಾಗಿದ್ದು ಮಂಗಳೂರು- ಬೆಂಗಳೂರು ರಾಷ್ತ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು.
ಇಂದು ಬಾರಿ ಮಳೆಯಿಂದ ಉಂಟಾದ ನೆರೆ ನೀರಿಂದ ಬಂದ್ ಆಗಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರಕ್ಕೆ ತೆರವುಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 75 ಬಂದ್ ಮಾಡಿದ್ದ ಹಿನ್ನಲೆಯಲ್ಲಿ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಬಳಿ ಯ ಉದನೆಯಲ್ಲಿ ನೆರೆ ನೀರಿನಿಂದ ಸಂಪೂರ್ಣ ಬಂದ್ ಆಗಿತ್ತು. ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದಾಗಿ ಹೆದ್ದಾರಿಯ ಮೇಲೆ ನೀರು ಹರಿದು ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿತ್ತು. ಈ ನಡುವೆ ಕುಮಾರಧಾರ ನದಿಯ ನೀರು ಕೊಂಚ ಇಳಿಮುಖವಾದ ಹಿನ್ನಲೆಯಲ್ಲಿ ಹೆದ್ದಾರಿ ಮೇಲೆ ಹರಿಯುತ್ತಿದ್ದ ನೀರು ಇಳಿದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
You must be logged in to post a comment Login