DAKSHINA KANNADA
ಗೂಡ್ಸ್ ಟೆಂಪೋ ಪಲ್ಟಿ ಇಬ್ಬರ ಮೃತ್ಯು
ಗೂಡ್ಸ್ ಟೆಂಪೋ ಪಲ್ಟಿ ಇಬ್ಬರ ಮೃತ್ಯು
ಮಂಗಳೂರು ಅಗಸ್ಟ್ 9: ಗೂಡ್ಸ್ ಟೆಂಪೋ ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನಪ್ಪಿದ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ನಡೆದಿದೆ.
ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ಕಾಂಕ್ರಿಟ್ ಮಿಲ್ಲರ್ ಸಾಗಿಸುತ್ತಿದ್ದ 407 ಟೆಂಪೋ ಕಲ್ಲಾಜೆ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದಿದೆ. ಗೂಡ್ಸ್ ಟೆಂಪೋ ಒಳಗಿದ್ದ ಓರ್ವ ಮಹಿಳೆ ಮತ್ತು ಪುರುಷ ಸಾವನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login