LATEST NEWS
ಮಂಗಳೂರಿನಲ್ಲಿ ಕಾಂಗ್ಸೇಸ್ ನ ಎರಡು ಗುಂಪುಗಳ ನಡುವೆ ಹೊಯ್ ಕೈ

ಮಂಗಳೂರಿನಲ್ಲಿ ಕಾಂಗ್ಸೇಸ್ ನ ಎರಡು ಗುಂಪುಗಳ ನಡುವೆ ಹೊಯ್ ಕೈ
ಮಂಗಳೂರು ಅಗಸ್ಟ್ 9: ಮಂಗಳೂರಿನಲ್ಲಿ ನಡೆದ ಕ್ವಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಕಾಂಗ್ರೆಸಿನ ಎರಡು ಗುಂಪಿನ ಮಧ್ಯೆ ಹೊಯ್ ಕೈ ನಡೆದಿದೆ.
ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಬೆಂಬಲಿಗರಿಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಬೆಂಬಲಿಗ ಪುನೀತ್ ಶೆಟ್ಟಿ ಅವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಮಂಗಳೂರಿನ ಪುರಭವನದಲ್ಲಿ ನಡೆದ ಕ್ವಿಟ್ ಇಂಡಿಯಾ ಕಾರ್ಯಕ್ರಮ ಹ್ಮಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಬೆಂಬಲಿಗರಿಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಬೆಂಬಲಿಗ ಪುನೀತ್ ಶೆಟ್ಟಿ ಅವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಮಿಥುನ್ ರೈ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿ ಚೈನ್ ಕಿತ್ತುಕೊಂಡಿದ್ದಾರೆ ಎಂದು ಇಂಟಕ್ ನಾಯಕ ಪುನಿತ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಮಾಜಿ ಸಚಿವ ರಮಾನಾಥ ರೈ, ಐವನ್ ಡಿಸೋಜರಿಂದ ಮಧ್ಯಪ್ರವೇಶಿಸಿ ಪರಸ್ಥಿತಿ ತಿಳಿಗೊಳಿಸಿದ್ದಾರೆ.