LATEST NEWS
ವೈಜ್ಞಾನಿಕ ಜಗತ್ತಿಗೆ ಮತ್ತೆ ಸವಾಲೆಸೆದರು ಈ ನಾಗಪಾತ್ರಿ – ಮನೆಯ ಪಂಚಾಂಗ ಅಗೆದು ನಾಗಶಿಲೆ ತೆಗೆದು ಕೊಟ್ಟ ನಾಗಪಾತ್ರಿ
ವೈಜ್ಞಾನಿಕ ಜಗತ್ತಿಗೆ ಮತ್ತೆ ಸವಾಲೆಸೆದರು ಈ ನಾಗಪಾತ್ರಿ – ಮನೆಯ ಪಂಚಾಂಗ ಅಗೆದು ನಾಗಶಿಲೆ ತೆಗೆದು ಕೊಟ್ಟ ನಾಗಪಾತ್ರಿ
ಉಡುಪಿ ನವೆಂಬರ್ 19: ಉಡುಪಿಯಲ್ಲಿ ನಾಗ ಪವಾಡ ನಡೆದಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಆಧ್ಯಾತ್ಮಿಕ ಚಿಂತಕ ನಾಗರಾಜ್ ಭಟ್ ಹೇಳಿದ ನುಡಿ ಸತ್ಯವಾಗಿದೆ. ಮಣ್ಣಲ್ಲಿ ಹುದುಗಿದ್ದ ಸಾವಿರಾರು ವರ್ಷ ಹಳೆಯ ನಾಗವಿಗ್ರಹವೊಂದು ಪವಾಡ ಸದೃಶವಾಗಿ ಪತ್ತೆಯಾಗಿದೆ.
ಹೊಸದಾಗಿ ನಿರ್ಮಿಸಿದ ಮನೆಯ ವರಾಂಡ ಅಗೆದಾಗಿ 6 ಅಡಿ ಆಳದಲ್ಲಿ ನಾಗನಕಲ್ಲು ಪತ್ತೆಯಾದ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿ ಬರ್ಸಬೆಟ್ಟು ಎಂಬಲ್ಲಿ ನಡೆದಿದೆ.
ಹೆಬ್ರಿ ತಾಲೂಕಿನ ಮುದ್ರಾಡಿ ಮೂಲದ ಟ್ರಾನ್ಸ್ ಪೊರ್ಟ್ ಉದ್ಯಮಿ ಗಂಗಾಧರ ಶೆಟ್ಟಿ ಮುಂಬೈನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ಉದ್ಯಮದಲ್ಲಿ ಹೆಸರು , ಸಂಪಾದನೆ ಮಾಡಿದ ನಂತರ ತಮ್ಮ ಊರಾದ ಮುದ್ರಾಡಿಯಲ್ಲಿ ಒಂದು ಬಂಗ್ಲೆ ಕಟ್ಟಿಸಿದ್ದಾರೆ.
ಆದರೆ ಹೊಸ ಕಟ್ಟಿಸಿದ ನಂತರ ಗಂಗಾಧರ ಶೆಟ್ಟಿ ಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರಲಾರಂಭಿಸಿದ್ದವು, ಮನೆಯಲ್ಲಿ ನೆಮ್ಮದಿ ಇರಲಿಲ್ಲ ಇತ್ತ ಉದ್ಯಮ ದಲ್ಲೂ ನಷ್ಟವಾಯ್ತು. ಕೊನೆಗೆ ಆದ್ಯಾತ್ಮ ಚಿಂತನೆಗೆನಾಗಾರಾಧಕರಾದ ತೀರ್ಥಹಳ್ಳಿ ಯ ನಾಗರಾಜ್ ಭಟ್ರನ್ನ ಭೇಟಿಯಾದರು.
ಈ ಸಂದರ್ಭದಲ್ಲಿ ಅವರು ಕೊಟ್ಟ ಸಲಹೆ ವಿಚಿತ್ರವಾಗಿತ್ತು. ನಿಮ್ಮ ಮನೆಯ ಹಾಲ್ ನಲ್ಲಿ ಸಮಸ್ಯೆ ಇದೆ. ನಿಮಗಿರುವ ಎಲ್ಲಾ ತೊಂದರೆಗೂ ನಾಗದೋಷವೇ ಕಾರಣ. ಹಾಲ್ ನ ಮಾರ್ಬಲ್ ಅಗೆದು ಆರಡಿ ಒಳ ಹೋದ್ರೆ ಒಂದು ನಾಗ ವಿಗ್ರಹ ಸಿಗುತ್ತೆ ಅಂತ ಎಂದು ಹೇಳಿದ್ದರು, ಅಲ್ಲದೆ ನಾಗ ವಿಗ್ರಹದ ಚಿತ್ರ ವನ್ನೂ ಬಿಡಿಸಿಕೊಟ್ಟಿದ್ದರು.
ನಂತರ ನಾಗರಾಜ್ ಭಟ್ರ ಮಾತು ನಂಬಿ, ಕೋಣೆಯ ನೆಲ ಅಗೆದಾಗ ಕಂಡು ಬಂದಿದ್ದು ನಾಗರಾಜ್ ಭಟ್ ಹೇಳಿದಂತೆ ಆರಡಿ ಆಳದಲ್ಲಿ ಪುರಾತನ ನಾಗ ವಿಗ್ರಹ ಪತ್ತೆಯೂ ಆಗಿತ್ತು. ಇದು ಸಾವಿರಾರು ವರ್ಷಗಳ ಹಳೆಯ ವಿಗ್ರಹ ಅನ್ನೋದು ತಿಳಿದುಬಂದಿದೆ. ಈ ನಾಗನ ಪ್ರತಿಮೆಗೆ ಜೈನರ ಕಾಲದಲ್ಲಿ ಆರಾಧನೆಯಾಗುತ್ತಿದ್ದು ಬಳಿಕ ಭೂಗರ್ಭ ಸೇರಿತ್ತು. ಕಾಲಾಂತರದಲ್ಲಿ ಗಂಗಾಧರ ಶೆಟ್ರು ಅದೇ ಜಾಗದಲ್ಲಿ ಮನೆ ಕಟ್ಟಿದರು.
ಹಳೇ ಮನೆ ಕೆಡವಿ ಹೊಸ ಮನೆ ನಿರ್ಮಾಣ ಸಂದರ್ಭ ಹೆಚ್ಚುವರಿ ಜಾಗವನ್ನು ಬಳಸಿಕೊಳ್ಳಲಾಗಿತ್ತು. ಭೂಗತವಾಗಿದ್ದ ನಾಗನಕಲ್ಲು ಮನೆಯ ಪಂಚಾಂಗದೊಳಗೆ ಸೇರಿದ್ದರಿಂದ ಹಲವು ಸಮಸ್ಯೆ ಎದುರಿಸಬೇಕಾಯಿತು. ಉತ್ತರಾಯಣದಲ್ಲಿ ಪುನಃ ಪ್ರತಿಷ್ಠಾ ಕಾರ್ಯ ನಡೆಯಬೇಕಿದೆ.
VIDEO