ವಿದ್ಯುತ್ ತಗಲಿ ಗಾಯಗೊಂಡಿದ್ದ ಕೋತಿ ರಕ್ಷಣೆ

ಬೆಳ್ತಂಗಡಿ ನವೆಂಬರ್ 18: ವಿದ್ಯುತ್ ತಗಲಿ ಗಂಭೀರವಾಗಿ ಗಾಯಗೊಂಡಿದ್ದ ಕೋತಿಯೊಂದನ್ನು ನಾಲ್ವರು ಯುವಕರು ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪೂಂಜಾಲುಕಟ್ಟೆ ಸಮೀಪದ ಗಂಪದಡ್ಕ ಎಂಬಲ್ಲಿ ತೋಟವೊಂದರ ಮಧ್ಯೆ ಹಾದು ಹೋಗುವ ವಿದ್ಯುತ್ ತಂತಿಗೆ ಸಿಲುಕಿ ಕೋತಿಯೊಂದು ಗಂಭೀರವಾಗಿ ಗಾಯಗೊಂಡಿತ್ತು.

ನಡೆದಾಡಲೂ ಸಾಧ್ಯವಾಗದೆ, ಆಹಾರ ತಿನ್ನಲೂ ಸಾಧ್ಯವಾಗದ ಈ ಕೋತಿಯನ್ನು ಗಮನಿಸಿದ ಸ್ಥಳೀಯ ನಾಲ್ವರು ಯುವಕರು ಕೋತಿಯನ್ನು ಸ್ಥಳೀಯ ಪಶು ವೈದ್ಯಕೀಯ ಚಿಕಿತ್ಸಾಲಯ ಕ್ಕೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ.

ಯುವಕರ ಈ ಮಾನವೀಯತೆಗೆ ಭಾರೀ ಪ್ರಶಂಸೆಯೂ ವ್ಯಕ್ತವಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಇದೇ ಕೋತಿಗಳು ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿಗೆ ಭಾರೀ ಹಾನಿ ಮಾಡುತ್ತಿದ್ದರೂ, ಗಾಯಗೊಂಡ ಕೋತಿಗೆ ಮರು ಜೀವ ನೀಡಿರುವ ಯುವಕರ ಮಾನವೀಯತೆಗೆ ಹ್ಯಾಟ್ಸ್ ಆಫ್ ಎನ್ನಲೇ ಬೇಕು.

Facebook Comments

comments