Connect with us

DAKSHINA KANNADA

ಮೈಸೂರು ಒಡೆಯರ್ ಯದುವೀರ್ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ

ಮೈಸೂರು ಒಡೆಯರ್ ಯದುವೀರ್ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ

ಪುತ್ತೂರು,ನವಂಬರ್ 2: ಮೈಸೂರು ಅರಮನೆಯ ಯದುವೀರ ಕೃಷ್ಣರಾಜ ಒಡೆಯರ್ ಇಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಮುಂಜಾನೆ ಕ್ಷೇತ್ರಕ್ಕೆ ಆಗಮಿಸಿದ ಅವರು ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿರುವ ಕೋದಂಡರಾಮನ ಹಾಗೂ ಪಂಚಮುಖಿ ಆಂಜನೇಯನ ವಿಗ್ರಹಕ್ಕೆ ವಿಶೇಷ ಪೂಜೆ ನೆರವೇರಿಸಿದರು. ಕ್ಷೇತ್ರಕ್ಕೆ ಬಂದಾಗ ಮನಸ್ಸಿಗೆ ಮುದ ದೊರೆಯುತ್ತದೆ. ಈ ಕಾರಣಕ್ಕಾಗಿ ದಕ್ಷಿಣಕನ್ನಡ ಜಿಲ್ಲೆಯ ಭಾಗಕ್ಕೆ ಬಂದಾಗಲೆಲ್ಲಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ. ಇದು ಮೂರನೇ ಭೇಟಿಯಾಗಿದೆ. ನಾಡಿನ ಸಮಸ್ತ ಜನರಿಗೆ ಸುಖ ಶಾಂತಿ ಲಭಿಸಲಿ, ನಾಡಿನಲ್ಲಿ ಸುಭೀಕ್ಷೆ ನೆಲೆಸಲಿ ಎಂದು ದೇವರಲ್ಲಿ ಬೇಡಿದ್ದೇನೆ ಎಂದು ಅವರು ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಯದುವೀರ್ ಪತ್ನಿ ತೃಷಿಕಾ ಕುಮಾರಿ ಗರ್ಭಿಣಿಯಾಗಿದ್ದು, ಆಕೆ ಸುಖ ಪ್ರಸವಕ್ಕೂ ದೇವರಲ್ಲಿ ಯದುವೀರ್ ಬೇಡಿಕೊಂಡಿದ್ದಾರೆ.