LATEST NEWS
ಜಸ್ಟ್ ಮಿಸ್ – ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ರನ್ ವೇ ನಲ್ಲಿ ಇಂಡಿಗೋ ಟಚ್‌ಡೌನ್-ಏರ್ ಇಂಡಿಯಾ ಟೇಕ್-ಆಫ್
ಮುಂಬೈ ಜೂನ್ 09 : ಎಟಿಸಿ ಅಧಿಕಾರಿಗಳ ಪ್ರಮಾದಕ್ಕೆ ಒಂದೇ ರನ್ ವೇ ನಲ್ಲಿ ಎರಡು ವಿಮಾನಗಳು ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ಪರಸ್ಪರ ಡಿಕ್ಕಿಯಾಗುವ ಹಂತಕ್ಕೆ ತಲುಪಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತವೊಂದು ತಪ್ಪಿದ್ದು ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.
ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಏಕಕಾಲದಲ್ಲಿ 2 ವಿಮಾನಗಳ ಭೂಸ್ಪರ್ಶ, ಟೇಕಾಫ್ ಆಗಿದೆ. ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ಎರಡೂ ವಿಮಾನಗಳ ಢಿಕ್ಕಿ ತಪ್ಪಿದೆ. ಏರ್ ಇಂಡಿಯಾ ಜೆಟ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗಿದೆ. ಇಂಡಿಗೋ ವಿಮಾನ ಇಂದೋರ್‌ನಿಂದ ಮುಂಬೈಗೆ ಬರುತ್ತಿದ್ದರೆ, ಏರ್ ಇಂಡಿಯಾ ವಿಮಾನವು ಕೇರಳದ ತಿರುವನಂತಪುರಕ್ಕೆ ಹೊರಟಿತು. ಏರ್ ಇಂಡಿಯಾ ಜೆಟ್ ಟೇಕಾಫ್ ಆಗುತ್ತಿದ್ದ ಅದೇ ರನ್ ವೇ ಮೇಲೆ ಇಂಡಿಗೋ ವಿಮಾನವೊಂದು ಭೂಸ್ಪರ್ಶ ಮಾಡಿದ್ದು, ಈ ಸಂದರ್ಭದಲ್ಲಿ ಎರಡೂ ವಿಮಾನಗಳಲ್ಲಿ ನೂರಾರು ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಕೆಲವೇ ಸೆಕಂಡ್ ಗಳ ಅಂತರವಿದ್ದ ಕಾರಣ ಉಭಯ ವಿಮಾನಗಳಲ್ಲಿನ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಇಂದೋರ್-ಮುಂಬೈ ವಿಮಾನದ ಪೈಲಟ್ ಎಟಿಸಿಯ ಸೂಚನೆಗಳನ್ನು ಅನುಸರಿಸಿದ್ದಾರೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. ಏರ್ ಇಂಡಿಯಾ ಕೂಡ ಎಟಿಸಿ ತನ್ನ ವಿಮಾನವನ್ನು ಟೇಕ್-ಆಫ್ ಮಾಡಲು ತೆರವುಗೊಳಿಸಿದೆ ಎಂದು ಹೇಳಿದೆ. AI657 ಮುಂಬೈನಿಂದ ತಿರುವನಂತಪುರಕ್ಕೆ ಜೂನ್ 8 ರಂದು ಟೇಕ್-ಆಫ್ ರೋಲ್ ಆಗಿತ್ತು. ಏರ್ ಇಂಡಿಯಾ ವಿಮಾನವನ್ನು ರನ್‌ವೇಗೆ ಪ್ರವೇಶಿಸಲು ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ತೆರವುಗೊಳಿಸಲಾಯಿತು ಮತ್ತು ನಂತರ ಟೇಕ್-ಆಫ್ ಆಗಿದೆ ಎಂದು ಎರ್ ಇಂಡಿಯಾ ತಿಳಿಸಿದೆ. ಎರಡು ವಿಮಾನಗಳು ಮಾತ್ರ ಕೂದಲೆಳೆಯ ಅಂತರದಲ್ಲಿ ಅಪಘಾತದಿಂದ ತಪ್ಪಿಸಿಕೊಂಡಿವೆ.