Connect with us

    LATEST NEWS

    ಕಾಣೆಯಾಗಿದ್ದ ಮಹಿಳೆಯ ಮೃತದೇಹ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ

    ಇಂಡೋನೇಷ್ಯಾದ ಜೂನ್ 09: ಕಾಣೆಯಾಗಿದ್ದ ಮಹಿಳೆಯೊಬ್ಬರು ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ‌ ನಡೆದಿದೆ.


    ಮೃತ ಮಹಿಳೆಯನ್ನು ಫರಿದಾ (49) ಎಂದು ಗುರುತಿಸಲಾಗಿದೆ. ದೈತ್ಯ ಹೆಬ್ಬಾವು ಮಹಿಳೆಯನ್ನು ಜೀವಂತವಾಗಿ ನುಂಗಿದೆ ಎಂದು ಹೇಳಲಾಗಿದೆ. ಈ ಘಟನೆ ಇಂಡೋನೇಷ್ಯಾದ ದಕ್ಷಿಣದ ಪ್ರಾಂತ್ಯವಾದ ಸುಲಾವೇಸಿ ಬಳಿಯ ಕಾಲಾಪಾಂಗ್ ಎಂಬಲ್ಲಿ ನಡೆದಿದೆ.
    ಮಹಿಳೆ ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಗ್ರಾಮದ ಅರಣ್ಯದಲ್ಲಿ 16 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು. ಹೆಬ್ಬಾವು ಮುಂದೆ ಹೋಗದೇ ತೆವಳುವುದನ್ನು ಕಂಡು ಅರಣ್ಯ ಇಲಾಖೆಯವರು ಹೆಬ್ಬಾವಿನ ಹೊಟ್ಟೆ ಸೀಳಿದಾಗ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply