Connect with us

  FILM

  ಮುಂಬೈ – ಏರೋ ಬ್ರಿಡ್ಜ್ ನಲ್ಲಿ ಸಿಕ್ಕಿಹಾಕಿಕೊಂಡ ನಟಿ ರಾಧಿಕಾ ಅಪ್ಟೆ…!!

  ಮುಂಬೈ ಜನವರಿ 13 : ಬೆಳಿಗ್ಗೆ ಪ್ರಯಾಣಕ್ಕೆ ವಿಮಾನ ಏರಲು ಹೋಗಿದ್ದ ನಟಿ ರಾಧಿಕಾ ಅಪ್ಟೆ ವಿಮಾನ ನಿಲ್ದಾಣದ ಏರೋ ಬ್ರಿಡ್ಜ್ ನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ವಿಮಾನವೊಂದರ ಪ್ರಯಾಣಿಕರು ಏರೋ ಬ್ರಿಡ್ಜ್ ನಲ್ಲಿ ಧೀರ್ಘ ಸಮಯದವರೆಗೆ ಕಾಯಬೇಕಾದ ಘಟನೆ ಕುರಿತು ಬಾಲಿವುಡ್ ನಟಿ ರಾಧಿಕಾ ಆಪ್ಟೆ ಶನಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


  ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆ ಹೆಸರಿಸದೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ಇಂದು ಬೆಳಿಗ್ಗೆ 8:30ಕ್ಕೆ ವಿಮಾನದಲ್ಲಿ ತೆರಳಬೇಕಾಗಿತ್ತು. ಆದರೆ, 10-50 ಆದರೂ ವಿಮಾನ ಹೊರಡಲೇ ಇಲ್ಲ. ಎಲ್ಲಾ ಪ್ರಯಾಣಿಕರನ್ನು ಏರೋಬ್ರಿಡ್ಜ್‌ಗೆ ಹಾಕಿಲಾಗಿತ್ತು ಎಂದು ಅವರು ಹೇಳಿದ್ದಾರೆ.

  ಈ ಸಂಬಂಧ ವಿಡಿಯೋವೊಂದನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ಹಲವಾರು ಪ್ರಯಾಣಿಕರು ಲಾಕ್ ಮಾಡಿದ ಗಾಜಿನ ಬಾಗಿಲಿನ ಹಿಂದೆ ಕಾಣಿಸಿಕೊಂಡಿದ್ದಾರೆ. ಮಕ್ಕಳು ಮತ್ತು ವೃದ್ಧರನ್ನೊಳಗೊಂಡ ಪ್ರಯಾಣಿಕರನ್ನು ಒಂದು ಗಂಟೆಗೂ ಹೆಚ್ಚು ಕಾಲ ಕಾಯಿಸಲಾಯಿತು. ಬಾಗಿಲು ತೆರೆಯಲು ಭದ್ರತಾ ಸಿಬ್ಬಂದಿ ನಿರಾಕರಿಸಿದರು ಎಂದು 38 ವರ್ಷದ ನಟಿ ಹೇಳಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply