Connect with us

  LATEST NEWS

  ಉಡುಪಿಯ ಸರಕಳ್ಳನನ್ನು ಬಂಧಿಸಿದ ಮೂಡುಬಿದ್ರೆ ಪೊಲೀಸರು, ಕದ್ದ ಚಿನ್ನದ ಸರ, ಮೊಬೈಲ್ ವಶ..!

  ಮೂಡುಬಿದಿರೆ: ಉಡುಪಿ ಜಿಲ್ಲೆ ಮಣಿಪಾಲ ಮತ್ತು ಬ್ರಹ್ಮಾವರದಲ್ಲಿ ನಡೆದ ಪ್ರತ್ಯೇಕ ಕಳವು ಪ್ರಕರಣದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

  ಬ್ರಹ್ಮಾವರಬೆಳ್ಮಾರು ಆರೂರುಬೈಲು ಮನೆಯ ದೀಕ್ಷಿತ್(27) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಕಳವಾದ ಕಳುವಾದ ಸುಮಾರು ರೂ 50,000 ಮೌಲ್ಯದ ಬಂಗಾರದ ತಾಳಿ ಸರ ಮತ್ತು ಮೊಬೈಲ್ ಫೋನ್ ವಶ ಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಕ್ರ:121/2016 ಕಲಂ:454, 380 ಐಪಿಸಿ ಅಕ್ರ:71/2023 ಕಲಂ:457,380,511 ಐಪಿಸಿ ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಕ್ರ:310/2023 ಕಲಂ:380 ಐಪಿಸಿ ಯಂತೆ ಪ್ರಕರಣಗಳು ದಾಖಲಾಗಿವೆ.ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಮತ್ತು ದಿವಾಕರ್ ರೈ , ಸಿದ್ದಪ್ಪ ನರನೂರು ಪೊಲೀಸ್ ಉಪ ನಿರೀಕ್ಷಕರು ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ನಾಗರಾಜ್ ಲಮಾಣಿ, ಅಕೀಲ್ ಅಹಮ್ಮದ್, ಚಂದ್ರಹಾಸ ರೈ ಮತ್ತು ವೆಂಕಟೇಶ್ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

  Share Information
  Advertisement
  Click to comment

  You must be logged in to post a comment Login

  Leave a Reply