DAKSHINA KANNADA
ಬಹುಭಾಷಾ ನಟಿ ವಿನ್ನಿ ಫೆರ್ನಾಂಡಿಸ್ ನಿಧನ
ಮಂಗಳೂರು, ಜುಲೈ, 29: ಕನ್ನಡ, ತುಳು, ಮತ್ತು ಕೊಂಕಣಿ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ನಟಿ ವಿನ್ನಿ ಫೆರ್ನಾಂಡಿಸ್ ಜುಲೈ 29 ರ ಗುರುವಾರ ಹೃದಯಘಾತದಿಂದ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರಗಳಲ್ಲಿ ನಟಿಸಿದ್ದ ಅವರು ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದರು.
ಇವರ ಕಲಾ ಸೇವೆಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಮೃತರು ಪತಿ ವಿನ್ಸೆಂಟ್, ಮತ್ತು ಮಕ್ಕಳು ಪ್ರತಾಪ್ ಮತ್ತು ಬಬಿತಾ ಇವರನ್ನು ಅಗಲಿದ್ದಾರೆ