Connect with us

    LATEST NEWS

    ಕೇರಳದಲ್ಲಿ ಕೊರೊನಾ ಪ್ರಕರಣ ಏರಿಕೆ….2 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ

    ಕೇರಳ ಜುಲೈ 29: ಕೊರೊನಾ ಪ್ರಕರಣ ಮೊದಲು ದಾಖಲಾದ ಕೇರಳ ರಾಜ್ಯದಿಂದಲೇ ಕೊರೊನಾದ ಮೂರನೇ ಅಲೆ ಪ್ರಾರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿದ್ದು, ನಿನ್ನೆ ಒಂದೇ ದಿನ ಕೇರಳದಲ್ಲಿ 22,056 ಕೊರೊನಾ ಪ್ರಕರಣ ದಾಖಲಾಗಿದೆ. ಈ ಹಿನ್ನಲೆ ಕೇರಳದಲ್ಲಿ ಜುಲೈ 31 ಹಾಗೂ ಅಗಸ್ಟ್ 1 ರಂದು 2 ದಿನ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.


    ದೇಶದಲ್ಲಿ ಶೀಘ್ರವೇ ಕೊರೊನಾ ಮೂರನೇ ಅಲೆ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಸಿದ ಬೆನ್ನಲ್ಲೇ, ನಿತ್ಯ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಾಗಿದ್ದು, 24 ಗಂಟೆಯಲ್ಲಿ 43,654 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಇದರಲ್ಲಿ ಶೇ.50ರಷ್ಟು ಪ್ರಕರಣ ಕೇರಳದಲ್ಲಿಯೇ ವರದಿಯಾಗಿವೆ. ಮಂಗಳವಾರ 29,689 ಮಂದಿಗೆ ಸೋಂಕು ತಗುಲಿತ್ತು. ಈ ದಿಢೀರ್‌ ಏರಿಕೆಯಿಂದಾಗಿ ದೇಶದಲ್ಲಿ ಮೂರನೇ ಅಲೆ ಆರಂಭವಾಗಿದೆಯೇ ಎಂಬ ಭೀತಿ ಸೃಷ್ಟಿಯಾಗಿದೆ.


    ಒಂದೇ ದಿನದಲ್ಲಿ ಕೇರಳದಲ್ಲಿ 22,159 ಮಂದಿಗೆ ಸೋಂಕು ದೃಢಪಟ್ಟರೆ, ಮಹಾರಾಷ್ಟ್ರದಲ್ಲಿ 6,258, ಮಿಜೋರಾಂ 1,845, ತಮಿಳುನಾಡು 1,767 ಹಾಗೂ ಒಡಿಶಾದಲ್ಲಿ 1,629 ಜನಕ್ಕೆ ಸೋಂಕು ತಗುಲಿದೆ. ಕೊರೊನಾ ಹೆಚ್ಚುತ್ತಿರುವುದರಿಂದ ಕೇರಳ ಸರ್ಕಾರ ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಸರ್ಕಾರದ ಆದೇಶದಂತೆ ಜುಲೈ 31 ಮತ್ತು ಆಗಸ್ಟ್ 1ರಂದು ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರಲಿದೆ.

    ಕೇರಳದಲ್ಲಿ ಬುಧವಾರ 22,056 ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 33,27,301 ಸಕ್ರಿಯ ಪ್ರಕರಣಗಳಿವೆ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 131 ಮಂದಿ ಕೊರೊನಾಗೆ ಬಲಿಯಾಗಿದ್ದು, ಇದುವರೆಗೂ 16,457 ಮಂದಿ ಮೃತಪಟ್ಟಿದ್ದಾರೆ.
    ಇನ್ನು ಕೇರಳದಲ್ಲಿ ಇತ್ತೀಚೆಗೆ ಬಕ್ರೀದ್‌ ಹಿನ್ನೆಲೆಯಲ್ಲಿ ಕೊರೊನಾ ನಿಯಮ ಸಡಿಲಗೊಳಿಸಿದ ಕಾರಣ ಸೋಂಕು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಕೇರಳದಿಂದಲೇ ಮೂರನೇ ಅಲೆ ಆರಂಭವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply