Connect with us

KARNATAKA

ಶಾಸಕರ ಭವನದಲ್ಲಿ ಕಸ ಗುಡಿಸುತ್ತಿರುವ ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪೋಟೋ ವೈರಲ್

ಬೆಂಗಳೂರು : ಕುಂದಾಪುರದ ವಾಜಪೇಯಿ ಎಂದೇ ಖ್ಯಾತರಾಗಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪೋಟೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವಿಧಾನ ಸೌಧದಲ್ಲಿರುವ ಶಾಸಕರ ಭವನದ ತಮ್ಮ ರೂಂ ನ ಕಸವನ್ನು ತಾವೇ ಗುಡಿಸುತ್ತಿರುವ ಪೋಟೋ ಇದಾಗಿದ್ದು, ಶಾಸಕರಾದರೇ ಕೈಗೊಂದು ಕಾಲಿಗೊಂದು ಆಳುಗಳನ್ನು ಇಟ್ಟುಕೊಂಡು ಕೆಲಸ ಮಾಡಿಸುವವರ ನಡುವೆ ಹಾಲಾಡಿಯವರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ.


ಮೊದಲಿನಿಂದಲೂ ಸಿಂಪ್ಲಿಸಿಟಿಗೆ ಹೆಸರುವಾಸಿಯಾಗಿರುವ ಹಾಲಾಡಿಯವರು ಬೆಂಗಳೂರಿನ ತಮ್ಮ ಶಾಸಕರ ಭವನದ ಕೊಠಡಿಯ ಮುಂಭಾಗದಲ್ಲಿರುವ ಕಸವನ್ನು ತಾವೇ ಪೊರಕೆ ಹಿಡಿದು ತೆಗೆದಿದ್ದಾರೆ.

ಸದ್ಯ ಬಿಜೆಪಿಯಲ್ಲಿ ಹೊಸ ಸಿಎಂ ಆಗುತ್ತಿದ್ದಂತೆ ಶಾಸಕರಲ್ಲಾ ಮಂತ್ರಿಗಿರಿಗಾಗಿ ಮಖ್ಯಮಂತ್ರಿ ಹಾಗೂ ರಾಜ್ಯ ಉಸ್ತುವಾರಿ ಹಿಂದೆ ತಿರುಗಾಡುತ್ತಿದ್ದಾರೆ. ಆದರೆ ಇದೇ ಸಂಧರ್ಭ ಹಾಲಾಡಿಯವರು ಮಾತ್ರ ತಮ್ಮ ಪಾಡಿಗೆ ಜನರ ಸಮಸ್ಯೆಗಳಿಗೆ ಪರಿಹಾರದ ಕುರಿತ ಪೈಲ್ ನ್ನು ಹಿಡಿದು ಬೆಂಗಳೂರಿನಲ್ಲಿದ್ದಾರೆ.


ಸರಳ ಸಜ್ಜನ ರಾಜಕಾರಣಿಯಾಗಿ ಹೆಸರು ಮಾಡಿರುವ ಹಾಲಾಡಿಯವರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಬಿಜೆಪಿ ಸರಕಾರ ರಚನೆಯಾದಾಗಿನಿಂದ ಕೇಳಿ ಬಂದಿದೆ. ಕಳೆದ 2 ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಹಾಲಾಡಿಯವರಿಗೆ ಸಚಿವ ಸ್ಥಾನ ತಪ್ಪಿದೆ.
ಈ ಬಾರಿಯಾದರೂ ಹಾಲಾಡಿ ಅವರಿಗೆ ಸಚಿವ ಸ್ಥಾನ ಸಿಗಬಹುದೇ ಎಂದು ಅಭಿಮಾನಿಗಳು ಖಾತರದಿಂದ ಕಾಯುತ್ತಿದ್ದಾರೆ.