Connect with us

LATEST NEWS

ವೈರಲ್ ವಿಡಿಯೋ – ಏಕಕಾಲದಲ್ಲಿ ರಸ್ತೆ ದಾಟಿದ 3000ಕ್ಕೂ ಅಧಿಕ ಕೃಷ್ಣಮೃಗಗಳು..!!

ಗುಜರಾತ್ : ಇದು ಗುಜರಾತ್‌ನಲ್ಲಿ ಸೆರೆಯಾದ ಅದ್ಭುತ ದೃಶ್ಯ. ಒಂದೇ ಸಲ 3000ಕ್ಕೂ ಅಧಿಕ ಕೃಷ್ಣಮೃಗಗಳು ರಸ್ತೆ ದಾಟುತ್ತಿರುವ ಈ ಸೊಬಗಿನ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಗುಜರಾತಿನ ಭಾವನಗರದ ಕೃಷ್ಣ ಮೃಗಗಳ ರಾಷ್ಟ್ರೀಯ ಉದ್ಯಾನದಲ್ಲಿ 3000 ಕ್ಕೂ ಹೆಚ್ಚು ಕೃಷ್ಣ ಮೃಗಗಳು ರಸ್ತೆ ದಾಟುತ್ತಿರುವುದು ಕಂಡುಬಂದಿದೆ. ಗುಜರಾತಿನ ಮಾಹಿತಿ ಇಲಾಖೆಯ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದ್ದು, 20 ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ವೀವ್ಸ್ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಈ ಟ್ವೀಟ್ ಅನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ರೀಟ್ವೀಟ್ ಮಾಡಿದ್ದು, ಎಕ್ಸಲೆಂಟ್ ಎಂದು ಕೊಂಡಾಡಿದ್ದಾರೆ.