LATEST NEWS
ಮೊಯಿದ್ದಿನ್ ಬಾವಾ ಓವರ್ ಆಕ್ಟಿಂಗ್ ಗೆ ಕಟ್ ಹೇಳಿದ ಕಾಂಗ್ರೇಸ್ ಉಸ್ತುವಾರಿ ವೇಣುಗೋಪಾಲ್

ಮೊಯಿದ್ದಿನ್ ಬಾವಾ ಓವರ್ ಆಕ್ಟಿಂಗ್ ಗೆ ಕಟ್ ಹೇಳಿದ ಕಾಂಗ್ರೇಸ್ ಉಸ್ತುವಾರಿ ವೇಣುಗೋಪಾಲ್
ಸುರತ್ಕಲ್ ಮಾರ್ಚ್ 20: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಶಾಸಕ ಮೊಯಿದ್ದೀನ್ ಬಾವಾ ತಾನು ಮಾಡಿರುವ ಸಾಧನೆಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತೋರಿಸಲು ಹೋಗಿ ಮುಜುಗರಕ್ಕೀಡಾದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.
ರಾಹುಲ್ ಗಾಂಧಿ ಅವರ ಜನಾಶೀರ್ವಾದ ಯಾತ್ರೆಯ ಸಾರ್ವಜನಿಕ ಸಭೆ ಸುರತ್ಕಲ್ ನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಿ.ಎಂ.ಸಿದ್ಧರಾಮಯ್ಯ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಮೊಯಿದೀನ್ ಬಾವಾ ರಾಹುಲ್ ಗಾಂಧಿ ಅವರಲ್ಲಿ ತಾನು ಮಾಡಿದ ಕಾಮಗಾರಿಗಳನ್ನು ರಾಹುಲ್ ಗಾಂಧಿಯನ್ನು ಒಂದು ಕಡೆ ನಿಲ್ಲಲು ಬಿಡದ ರೀತಿಯಲ್ಲಿ ವಿವರಿಸುತ್ತಿದ್ದರು.

ಈ ಸಂದರ್ಭದಲ್ಲಿ ಮೊಯಿದೀನ್ ಬಾವಾರನ್ನು ಸುಮ್ಮನಾಗಿಸಲು ರಾಜ್ಯ ಕಾಂಗ್ರೇಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಇದ್ಯಾವುದರ ಗೊಡವೆಯೇ ಇಲ್ಲದೆ ತನ್ನ ಕೆಲಸವನ್ನು ತಾನೇ ಕೊಚ್ಚಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಬಾವಾ ವರ್ತನೆಯಿಂದ ರೋಸಿ ಹೋದ ವೇಣುಗೋಪಾಲ್ ಬಾವಾರಿಗೆ ಸುಮ್ಮನಿರುವಂತೆ ಖಡಕ್ಕ್ ಸೂಚನೆಯನ್ನು ವೇದಿಕೆಯಲ್ಲೇ ನೀಡಿದ್ದಾರೆ. ಇದರಿಂದ ಇರಿಸುಮುರಿಸುಕೊಂಡ ಬಾವಾ ವೇದಿಕೆಯ ಹಿಂಬದಿಗೆ ಸರಿದಿದ್ದಾರೆ.
ಇದೆಲ್ಲವನ್ನೂ ವೀಕ್ಷಿಸುತ್ತಿದ್ದ ರಮಾನಾಥ ರೈ ಬಾವಾರಿಗೆ ವೇಣುಗೋಪಾಲ್ ನೀಡಿದ ಸೂಚನೆ ನೋಡಿ ಸಣ್ಣದಾಗಿ ನಕ್ಕು ಬಳಿಕ ನಗು ನುಂಗಿಕೊಂಡರು.