Connect with us

    DAKSHINA KANNADA

    ಕಾಂಗ್ರೆಸ್ ರಾಲಿಗೆ ಪೋಲಿಸರ ಕೊಡುಗೆ..!! ರಾಲಿಗೆ ಪೋಲೀಸ್ ಜೀಪನ್ನೂ ಬಳಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು

    ಕಾಂಗ್ರೆಸ್ ರಾಲಿಗೆ ಪೋಲಿಸರ ಕೊಡುಗೆ..!!

    ಪೋಲೀಸ್ ಜೀಪನ್ನೂ ರಾಲಿಗೆ ಬಳಸಿಕೊಂಡ ಕಾಂಗ್ರೇಸ್ ಕಾರ್ಯಕರ್ತರು

    ಮಂಗಳೂರು,ಮಾರ್ಚ್ 20: ಎ.ಐ.ಸಿ.ಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಗೆ ಇಂದು ಆಗಮಿಸಿದ್ದರು.

    ಈ ಸಂದರ್ಭದಲ್ಲಿ ಹಲವು ಅಕ್ರಮಗಳು ಸಾರ್ವಜನಿಕರ ಮುಂದೆ ಪ್ರತ್ಯಕ್ಷವಾಗಿ ಕಂಡು ಬಂದಿದೆ.

    ಸುರತ್ಕಲ್ ನಲ್ಲಿ ಬೀದಿ ದೀಪದ ಕಂಬದಿಂದ ಕಾರ್ಯಕ್ರಮಕ್ಕಾಗಿ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಪಡೆದರೆ, ಇನ್ನೊಂದೆಡೆ ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಆರಂಭಗೊಂಡ ರಾಹುಲ್ ಗಾಂಧಿ ರೋಡ್ ಶೋ ನಲ್ಲಿ ಸರಕಾರಿ ವಾಹನದ ದುರಪಯೋಗ ಮಾಡಲಾಗಿದೆ.

    ಪೋಲೀಸ್ ಇಲಾಖೆಗೆ ಸೇರಿದ ಬೊಲೋರೋ ಜೀಪ್ ನಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೇಸ್ ಧ್ವಜದೊಂದಿಗೆ ತುಂಬಿಕೊಂಡಿದ್ದರು.ಅಲ್ಲದೆ ಜೀಪ್ ನ ಬೋನೆಟ್ ಮೇಲೆ, ಅಕ್ಕ-ಪಕ್ಕ, ಹಿಂಬದಿ ಹೀಗೆ ಎಲ್ಲಾ ಕಡೆಗಳಲ್ಲಿ ಕಾರ್ಯಕರ್ತರು ಈ ಜೀಪ್ ನಲ್ಲಿ ನೇತಾಡಿಕೊಂಡಿದ್ದರು.ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಇಡೀ ಆಡಳಿತ ಯಂತ್ರವೇ ಈ ರೋಡ್ ಶೋನಲ್ಲಿ ಭಾಗಿಯಾಗಿತ್ತು.

    ಈ ನಡುವೆಯೇ ಸರಕಾರಿ ವಾಹನವನ್ನು ಈ ರೀತಿಯಲ್ಲಿ ದುರುಪಯೋಗಪಡಿಸುತ್ತಿರುವುದು ಆಡಳಿತಯಂತ್ರದ ಸ್ಪಷ್ಟ ಉದಾಹರಣೆಯಂತೆ ಇದು ಕಂಡು ಬರುತ್ತಿತ್ತು.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply