LATEST NEWS
ಜೈಲಿಗೆ ಹೋದ ಮುಖ್ಯಮಂತ್ರಿಯಿರುವ ವೇದಿಕೆಯಲ್ಲಿ ಪ್ರಧಾನಿಯಿಂದ ಭ್ರಷ್ಟಾಚಾರದ ಬಗ್ಗೆ ಮಾತು
ಜೈಲಿಗೆ ಹೋದ ಮುಖ್ಯಮಂತ್ರಿಯಿರುವ ವೇದಿಕೆಯಲ್ಲಿ ಪ್ರಧಾನಿಯಿಂದ ಭ್ರಷ್ಟಾಚಾರದ ಬಗ್ಗೆ ಮಾತು
ಮಂಗಳೂರು ಮಾರ್ಚ್ 20: ವೇದಿಕೆಯಲ್ಲಿ ಜೈಲಿಗೆ ಹೋದ ನಾಲ್ಕು ಮುಖಂಡರನ್ನು ಕುಳ್ಳಿರಿಸಿ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಜೈಲಿಗೆ ಹೋಗಿ ಬಂದ ಮಾಜಿ ಮುಖ್ಯಮಂತ್ರಿ ಅವರು ಕೂಡ ವೇದಿಕೆಯಲ್ಲಿರುತ್ತಾರೆ. ಭಾರತೀಯರು ಮೂರ್ಖರಲ್ಲ ಯೋಚನೆ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
ಮಂಗಳೂರಿನಲ್ಲಿ ಜನಾಶೀರ್ವಾದ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ಮೋದಿಯವರೇ ನಿಮಗೆ ಇನ್ನು ಒಂದು ವರ್ಷ ಇದೆ. ಯುವಕರಿಗೆ ಉದ್ಯೋಗ ನೀಡಿ, ರೈತರ ಬೆಳೆಗೆ ಸರಿಯಾದ ಮೌಲ್ಯ ಒದಗಿಸಿ ಎಂದು ಹೇಳಿದರು. ನಿಮ್ಮ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ್ ಎಲ್ಲವೂ ಫ್ಲಾಪ್ ಆಗಿದೆ. ಇನ್ನು ಮುಂದಾದರೂ ಸ್ವಲ್ಪವಾದರೂ ಕೆಲಸ ಮಾಡಿ, ಮಾತಿನಿಂದ ದೇಶ ನಡೆಯುವುದಿಲ್ಲ ಎಂದು ವ್ಯಂಗ್ಯವಾಡಿದರು. ದೇಶ ಸತ್ಯದ ಹಾದಿಯಲ್ಲಿ ನಡೆದಲ್ಲಿ, ಯಾವುದೇ ದೇಶವನ್ನು ಎದುರಿಸುವ ತಾಕತ್ ಹೊಂದಲಿದೆ ಎಂದು ಹೇಳಿದರು.
ರಾಜ್ಯ ದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಈ ಹಿಂದೆ ಮಾಡಿದ್ದಕ್ಕಿಂತ ದ್ವಿಗುಣ ಕೆಲಸ ಕಾಂಗ್ರೆಸ್ ರಾಜ್ಯದಲ್ಲಿ ಮಾಡಲಿದೆ ಎಂದು ಹೇಳಿದರು. ಕರ್ನಾಟಕ ಚುನಾವಣೆಯಲ್ಲಿ ಕಾರ್ಯಕರ್ತರ ಧ್ವನಿ ಕೇಳಿ ಅವರಿಗೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ ರಾಹುಲ್ ಚುನಾವಣೆಯಲ್ಲಿ ಬಿಜೆಪಿಯನ್ನು ಯಾವುದೇ ದ್ವೇಷದಿಂದ, ರೋಷದಿಂದಲ್ಲ, ಪ್ರೀತಿಯಿಂದ ಸೋಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಭೆಯ ನಂತರ ನಗರದ ರೋಸಾರಿಯೋ ಚರ್ಚೆ ಗೆ ಭೇಟಿ ನೀ಼ಡಿ ಪ್ರಾರ್ಥನೆ ಸಲ್ಲಿಸಿದರು.
You must be logged in to post a comment Login