LATEST NEWS
ಕಾರ್ಕಳ ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಮೊಯ್ಲಿ ಮಗ
ಕಾರ್ಕಳ ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಮೊಯ್ಲಿ ಮಗ
ಉಡುಪಿ, ಮಾರ್ಚ್ 27 : ರಾಜ್ಯದಲ್ಲಿ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಮಗ ಹರ್ಷ ಮೊಯಿಲಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ.
ಈ ಬಗ್ಗೆ ಸ್ವತ ಹರ್ಷ ಮೊಯಿಲಿ ಅವರು ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕಾರ್ಕಳ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದು,
ಗೋಪಾಲ್ ಭಂಡಾರಿ ಅವರನ್ನೇ ಸ್ಪರ್ಧೆಗಿಳಿಸಲು ನಾನು ಮತ್ತು ನಮ್ಮ ತಂದೆ ನಿರ್ಧರಿಸಿದ್ಧೇವೆ.
ಇದೇವೇಳೆ, ಕಾಂಗ್ರೆಸ್ನಲ್ಲಿ ಟಿಕೆಟ್ ಮಾರಾಟಕ್ಕಿವೆ ಎಂಬ ಟ್ವೀಟ್ ವಿವಾದದ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಅದು ಮುಗಿದ ಅಧ್ಯಾಯವೆಂದು ಕೆ.ಸಿ. ವೇಣುಗೋಪಾಲ್ ಅವರೇ ಹೇಳಿದ್ದಾರೆ.
ಟ್ವೀಟ್ಗೂ ಟಿಕೆಟ್ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅದು ಬೇರಾರೋ ಮಾಡಿರುವ ಟ್ವಿಟ್, ನಮ್ಮ ಟ್ವಿಟ್ಟರ್ ಹ್ಯಾಂಡಲ್ ನೋಡಿಕೊಳ್ಳುತ್ತಿದ್ದವರನ್ನ ಕೆಲಸದಿಂದ ಕಿತ್ತು ಹಾಕಿದ್ದೇವೆ.
ಕೆಪಿಸಿಸಿಯಿಂದ ಬಂದ ನೋಟಿಸ್ಗೂ ಹಲವು ದಿನಗಳ ಹಿಂದೆಯೇ ಉತ್ತರ ಕೊಟ್ಟಿದ್ದೇನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಕಚೇರಿಯಿಂದ ಉತ್ತರ ನೀಡಿದ್ದಕ್ಕೆ ತಕ್ಕ ರಶೀದಿಯನ್ನೂ ಪಡೆದಿರುತ್ತೇನೆ.
ಈ ಟ್ವೀಟ್ಗೂ ತಮ್ಮ ತಂದೆ ಹಾಗೂ ತನಗೂ ನೇರ ಸಂಬಂಧ ಇಲ್ಲ.
ಟ್ವಿಟ್ಟರ್ ಹ್ಯಾಂಡಲ್ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಅಚಾತುರ್ಯದಿಂದ ಈ ಘಟನೆ ನಡೆದಿದೆ.
ನಾನು ಮತ್ತು ನನ್ನ ತಂದೆ ಜೀವಮಾನದಲ್ಲಿ ಎಂದೂ ಕಾಂಗ್ರೆಸ್ ವಿರೋಧಿ ಕೆಲಸ ಮಾಡಿದವರಲ್ಲ.
ಈ ಘಟನೆ ಮುಗಿದ ಅಧ್ಯಾಯ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು..
You must be logged in to post a comment Login