LATEST NEWS
ಮಂಗಳೂರಿನಲ್ಲಿ ವೈಭವದ ಶ್ರೀರಾಮೋತ್ಸ: ರಾವಣನನ್ನು ದಹಿಸಿ ಸಂಭ್ರಮಿಸಿದ ರಾಮ ಭಕ್ತರು
ಮಂಗಳೂರಿನಲ್ಲಿ ವೈಭವದ ಶ್ರೀರಾಮೋತ್ಸ: ರಾವಣನನ್ನು ದಹಿಸಿ ಸಂಭ್ರಮಿಸಿದ ರಾಮ ಭಕ್ತರು
ಮಂಗಳೂರು ಮಾರ್ಚ್ 26: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ ನೇತೃತ್ವದಲ್ಲಿ 17ನೇ ವರ್ಷದ ಶ್ರೀ ರಾಮೋತ್ಸವದ ಅಂಗವಾಗಿ ಮಂಗಳೂರಿನಲ್ಲಿ ರಾವಣ ದಹನ ನಡೆಯಿತು.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ ನೇತೃತ್ವದಲ್ಲಿ ನಡೆದ ಈ ರಾಮೋತ್ಸವ ಕಾರ್ಯಕ್ರಮದಲ್ಲಿ ಇಂದು ಬೃಹತ್ ರಾವಣನ ಪ್ರತಿಕೃತಿಯನ್ನು ದಹಿಸಿ ರಾಮೋತ್ಸವ ಆಚರಣೆ ಮಾಡಲಾಯಿತು.
ವಿಎಚ್ ಪಿ, ಬಜರಂಗದಳ ಮುಖಂಡರು ರಾಮನ ವೇಷಧಾರಿಯನ್ನು ಅಧ್ಧೂರಿಯಾಗಿ ವೇದಿಕೆಗೆ ಕರೆ ತಂದರು ನಂತರ ರಾಮ ವೇಷಧಾರಿಯಿಂದ ರಾವಣನ ಪ್ರತಿಕೃತಿಗೆ ಬಾಣ ಪ್ರಯೋಗಿಸಿ ದಹಿಸಲಾಯಿತು.ರಾವಣ ಪ್ರತಿಕೃತಿ ದಹಿಸಿದ ಬಳಿಕ ವಿಎಚ್ ಪಿ, ಬಜರಂಗದಳ ಕಾರ್ಯಕರ್ತರಿಂದ ಕುಣಿದಾಡಿದರು.
ರಾಮೋತ್ಸವದ ಅಂಗವಾಗಿ ನೆಹರೂ ಮೈದಾನದಲ್ಲಿ ಶ್ರೀರಾಮ ದೇವರ ಪೂಜಾ ಕಾರ್ಯಕ್ರಮ ನಡೆಯಿತು.
ಹಿಂದೂ ಸಂಘಟನೆಗಳ ಮುಖಂಡರಾದ ಎಂ.ಬಿ. ಪುರಾಣಿಕ್, ಶರಣ್ ಪಂಪ್ ವೆಲ್, ಜಗದೀಶ್ ಶೇಣವ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾವಣ ದಹನ ಪೂರ್ವಭಾವಿಯಾಗಿ ಮಂಗಳೂರಿನ ರಸ್ತೆಯಲ್ಲಿ ಹನುಮಾನ್, ಶ್ರೀರಾಮನ ಪ್ರತಿಕೃತಿ, ಹುಲಿವೇಷಧಾರಿಗಳೊಂದಿಗೆ ಆಕರ್ಷಕ ಶೋಭಾಯತ್ರೆ ನಡೆಯಿತು.
ವಿಡಿಯೋಗಾಗಿ…
You must be logged in to post a comment Login