KARNATAKA
ನೆರೆಸಂತ್ರಸ್ತರ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ವಿಫಲ – ಐವನ್ ಡಿಸೋಜಾ
ನೆರೆಸಂತ್ರಸ್ತರ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ವಿಫಲ – ಐವನ್ ಡಿಸೋಜಾ
ಮಂಗಳೂರು ಅಕ್ಟೋಬರ್ 14: ನೆರೆ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಹಾಗೂ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು, ನೆರೆ ಪರಿಸ್ಥಿತಿ ನಿಭಾಯಿಸಲು ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರಕಾರ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ನೆರೆಹಾವಳಿ ಪರಿಹಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ 1 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದ್ದು, ಎನ್‍ಡಿಆರ್‍ಎಫ್ ಪ್ರಕಾರ 35 ಸಾವಿರ ಕೋಟಿ ನಷ್ಟವಾಗಿದೆ. ಅದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು 2,936 ಕೋಟಿ ಮಾತ್ರ. ಇನ್ನೂ ಕೇಂದ್ರ ಬರೀ 1200 ಕೋಟಿ ರೂ ಪರಿಹಾರ ನೀಡಿದೆ .
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ರಾಷ್ಟ್ರೀಯ ವಿಪತ್ತು ಘೋಷಿಸಲು ಆಗ್ರಹಿಸಿದ್ದೆವು. ರಾಜ್ಯಸರಕಾರ ಮೊಂಡುತನದಿಂದ ರಾಷ್ಟ್ರೀಯ ವಿಪತ್ತು ಘೋಷಿಸಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರೈತರಿಗೆ ಧೈರ್ಯ ತುಂಬಿ ಸಾಲಮನ್ನಾ ಮಾಡಬೇಕಾಗಿದೆ. ಕೇಂದ್ರದಿಂದ ದುಡ್ಡು ತರಲು, ನೆರೆಸಂತ್ರಸ್ತರ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ವಿಫಲವಾಗಿದೆ ಅಂತ ಐನ್ ಡಿಸೋಜ ಹೇಳಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಕ್ಯಾಮರ ಪ್ರಾಜೆಕ್ಸನ್ ಪ್ರಧಾನ ಮಂತ್ರಿ ಅಂತ ಐವನ್ ಕರೆದಿದ್ದಾರೆ.
ಕಸ ಹೆಕ್ಕಲು ಪ್ರಧಾನಮಂತ್ರಿ ಹೋಗಬೇಕು. ತಾನೆ ಕಸ ಹಾಕಿ ತಾನೇ ಹೆಕ್ಕುವುದು. ಸೆಲ್ಪ್ ಪ್ರಾಜೆಕ್ಸನ್ ಮಾಡ್ತಾ ಇದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ. ಇದೇ ಸಂದರ್ಭ ವಿಧಾನಸಭೆಯಲ್ಲಿ ಕ್ಯಾಮರ ನಿರ್ಭಂಧ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಜನರಿಗೆ ಜನಪ್ರತಿನಿಧಿಗಳ ಚರ್ಚೆ ತಿಳಿಯುವ ಹಕ್ಕಿದೆ. ಆದರೆ ರಾಜ್ಯದಲ್ಲಿ ಜನಪರ ಸರಕಾರ ಇಲ್ಲ. ಇದು ಆರ್ ಎಸ್ ಎಸ್ ಮತ್ತು ಬಿಜೆಪಿಯ ಜಂಗಿಕುಸ್ತಿಯಾಗಿದೆ. ಆಡಳಿತ ಮುಂದುವರಿಸಲು ಇವರಿಗೆ ನೈತಿಕ ಹಕ್ಕಿಲ್ಲ ಅಂತ ಐವನ್ ಜರಿದಿದ್ದಾರೆ.