Connect with us

LATEST NEWS

ಬೆಂಗ್ರೆಯ ಘಟನೆ ಹಿಂದೆ ಶಾಸಕ ಜೆ.ಆರ್ ಲೋಬೋ – ನಳಿನ್ ಕುಮಾರ್ ಆರೋಪ

ಬೆಂಗ್ರೆಯ ಘಟನೆ ಹಿಂದೆ ಶಾಸಕ ಜೆ.ಆರ್ ಲೋಬೋ – ನಳಿನ್ ಕುಮಾರ್ ಆರೋಪ

ಮಂಗಳೂರು ಫೆಬ್ರವರಿ 22: ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೋ ಬೆಂಗ್ರೆಯ ಘಟನೆ ಹಿಂದಿದ್ದಾರೆಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನ ನ ಬೆಂಗ್ರೆ ಯಲ್ಲಿ ನಡೆದ ಘರ್ಷಣೆ, ಕಲ್ಲು ತೂರಾಟ ಪ್ರಕರಣದ ಹಿಂದೆ  ಕಾಂಗ್ರೆಸ್ ನ ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಅವರು ಕಿಡಿಕಾರಿದರು.

ಸಮಾವೇಶದಿಂದ ಹಿಂದಿರುಗುತ್ತಿದ್ದಾಗ ಘೋಷಣೆ ಕೂಗಿದ್ದಕ್ಕೆ  ಘರ್ಷಣೆ ಆಗಿದೆಯೆಂದು ಮಂಗಳೂರು ದಕ್ಷಿಣ ಕ್ಷೇತ್ರ ದ ಶಾಸಕ ಜೆ ಆರ್ ಲೋಬೋ ಹಾಗು  ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಸಮಾವೇಶದಿಂದ ಹಿಂದಿರುಗುತ್ತಿದ್ದಾಗ ಕಾರ್ಯಕರ್ತರು ಘೋಷಣೆ ಹಾಕದಿರಲು ಮಂಗಳೂರು ಏನು ಪಾಕಿಸ್ಥಾನದಲ್ಲಿದೆಯಾ ಎಂದು ಅವರು ಪ್ರಶ್ನಿಸಿದರು. ಕೇವಲ ಘೋಷಣೆ ಕೂಗಿದ್ದಕ್ಕೆ ಮಾತ್ರ ಘರ್ಷಣೆ ನಡೆಯಲು ಹೇಗೆ ಸಾದ್ಯ ಎಂದು ಕೇಳಿದ ಅವರು ಇದರ ಹಿಂದೆ ಭಾರಿ ಸಂಚು ನಡೆಸಲಾಗಿದೆ ಎಂದು ಅವರು ಆರೋಪಿಸಿದರು.

ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯ ಗೊಂಡಿದ್ದಾರೆ.  ಘಟನೆಯ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗಳ್ಳುವಂತೆ ಅವರು ಒತ್ತಾಯಿಸಿದರು.