Connect with us

    LATEST NEWS

    ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ದೇಯಿ ಬೈದ್ಯೆತಿ ವಿಗ್ರಹಕ್ಕೆ ಕ್ಷಿರಾಭಿಷೇಕ

    ಮಂಗಳೂರು ಸೆಪ್ಟೆಂಬರ್ 12: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿ ಅವರ ವಿಗ್ರಹಕ್ಕೆ ಅರಣ್ಯ ಇಲಾಖೆಯ ವಿರೋಧದ ನಡುವೆಯೇ ಹಿಂದೂ ಸಂಘಟನೆಯ ಕಾರ್ಯಕರ್ತರು ಕ್ಷೀರಾಭಿಷೇಕ ಮೂಲಕ ಶುದ್ಧೀಕರಣ ಪ್ರಕ್ರಿಯೆ ನೆರವೇರಿಸಿದ್ದಾರೆ. ಕೋಟಿ ಚೆನ್ನಯರ ಜನ್ಮಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ದೇಯಿ ಬೈದ್ಯೆತಿ ಔಷಧ ವನ ವಿದ್ದು ಈ ಔಷಧ ವನದಲ್ಲಿ ದೇಯಿ ಬೈದ್ಯೆತಿ ಯ ಪುತ್ಥಳಿ ಸ್ಥಾಪಿಸಲಾಗಿತ್ತು.

    ಘಟನೆಯ ವಿವರ

    ಈಶ್ವರಮಂಗಲದ ನಿವಾಸಿ ಹನೀಫ್ ಎನ್ನುವ ಯುವಕ ಅರಣ್ಯ ಇಲಾಖೆಯು ನಿರ್ಮಿಸಿರುವ ಔಷಧೀಯ ವನದಲ್ಲಿ ನಿರ್ಮಿಸಿರುವ ದೇಯಿ ಬೈದ್ಯೆತಿಯ ಪುತ್ಥಳಿಯ ಪಕ್ಕದಲ್ಲಿ ಕೂತು ಪುತ್ಥಳಿಯ ಎದೆಯನ್ನು ಮುಟ್ಟುವ ಅನಾಗರಿಕ ವರ್ತನೆಯನ್ನು ತೋರಿ ಹಾಗೂ ಆ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಈ ಹಿನ್ನಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿ ಬಿಲ್ಲವ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ ಆರೋಪಿಯ ಬಂಧನವಾಗಿತ್ತು.

    ಅರಣ್ಯ ಇಲಾಖೆ ಅನುಮತಿ ನಿರಾಕರಣೆ

    ಈ ನಡುವೆ ತುಳುನಾಡಿನ ಕಾರ್ಣಿಕ ಪುರುಷರಾದ ಕೋಟಿ ಚೆನ್ನಯ್ಯರ  ತಾಯಿ ದೇಯಿ ಬೈದ್ಯೆತಿ ವಿಗೃಹಕ್ಕೆ ಎಂದು ಶುದ್ಧೀಕರಣ ಪ್ರಕ್ರಿಯೆ ನಿರ್ವಹಿಸಲು ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ದುರ್ಗಾ ವಾಹಿನಿ ನೇತೃತ್ವದಲ್ಲಿ ಸಾರ್ವಜನಿಕರು ದೇಯಿ ಬೈದಯೆತಿ ವಿಗೃಹಕ್ಕೆ ಕ್ಷೀರಾಭಿಷೇಕ ಮೂಲಕ ಶುದ್ಧೀಕರಣಕ್ಕೆ ಮುಂದಾಗಿದ್ದರು. ಆದರೆ ಔಷಧವನ ವನ್ನು ಪ್ರವೇಶಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಧೋರಣೆ ವಿರೋಧಿಸಿ ಔಷಧಿ ವನದ ಹೊರಗೆ ಪ್ರತಿಭಟನೆ ನಡೆಸಲಾಗಿತ್ತು .

    ದೇಯಿ ಬೈದ್ಯೆತಿ ವಿಗೃಹಕ್ಕೆ ಕ್ಷೀರಾಭಿಷೇಕ

    ಆದರೆ ಹಿಂದೂ ಸಂಘಟನೆಯ ಕಾರ್ಯಕರ್ತರು ಗೌಪ್ಯವಾಗಿ ಔಷಧವನ್ನು ಪ್ರವೇಶಿಸಿದೆ . ದೇಯಿ ಬೈದ್ಯೆತಿ ವಿಗೃಹಕ್ಕೆ ಕ್ಷೀರಾಭಿಷೇಕ ನೆರವೇರಿಸಿ ಶುದ್ಧೀಕರಣ ನೆರವೇರಿಸಿದೆ .ಈ ಕುರಿತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುತ್ತೂರು ತಾಲೂಕು ಪಂಚಾಯತ್ ನ ರಾಧಾಕೃಷ್ಣ ಬೊರ್ಕರ್, ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಶುದ್ದೀಕರಣ ಕಾರ್ಯ ನೆರವೇರಿಸಿದ್ದಾರೆ. ಅರಣ್ಯ ಇಲಾಖೆಯ ವಿರೋಧದ ನಡುವೆಯೂ  ದೇವರ ಇಚ್ಚೆಯಂತೆ ನಮ್ಮ ಮುಖೇನ ತಾಯಿ ದೇಯಿಬೈದ್ಯೆತಿಗೆ ಕಿರಾಭಿಷೇಕ ನೆರವೇರಿಸಲಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ್ಲ ಅಭಿಪ್ರಾಯಪಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply