Connect with us

    LATEST NEWS

    ಫೇಸ್ ಬುಕ್ ಸ್ನೇಹ,ಅತ್ಯಾಚಾರ : ಆರೋಪಿ ಬಂಧನ

    ಮಂಗಳೂರು, ಸೆಪ್ಟೆಂಬರ್ 13 : ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯನ್ನು ಪಾಂಡೇಶ್ವರ ಮಹಿಳಾ ಪೋಲಿಸರು ಬಂಧಿಸಿದ್ದಾರೆ. 29 ವರ್ಷದ ಮಂಗಳೂರಿನ ಬಿಜೈ ನಿವಾಸಿ ರಕ್ಷಿತ್ ಶೆಟ್ಟಿಯೇ ಅತ್ಯಾಚಾರ ಎಸಗಿದ ಆರೋಪಿ. ಪಾಂಡೇಶ್ವರ ಮಹಿಳಾ ಪೋಲಿಸರು ರಕ್ಷಿತ್ ಶೆಟ್ಟಿಯನ್ನು ಬಂಧಿಸಿ ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ರಕ್ಷಿತ್ ಶೆಟ್ಟಿಗೆ ಫೇಸ್ ಬುಕ್ ನಲ್ಲಿ  ಬಾಲಕಿಯ ಪರಿಚಯವಾಗಿತ್ತು. ಈ ಪರಿಚಯ ಗಳೆತನಕ್ಕೆ ತಿರುಗಿ ಬಹಳ ಸಲುಗೆಯಿಂದ ಇದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ರಕ್ಷಿತ್ ಶೆಟ್ಟಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಪೋಷಕರ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ. ಬಾಲಕಿಯ ಪೋಷಕರು ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿ ರಕ್ಷಿತ್ ಶೆಟ್ಟಿ ಕಂಬಿ ಎನಿಸುತ್ತಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply