LATEST NEWS
ಇಸ್ಲಾಂ ವಿರುದ್ದ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ – ಆರೋಪಿ ಬಂಧನ
ಮಂಗಳೂರು ಸೆಪ್ಟೆಂಬರ್ 13: ಯೇಸು ಕ್ರಿಸ್ತರು ಹಾಗೂ ಸಂತ ಮದರ್ ತೆರೆಸಾ ಅವರ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಅಕ್ಷರ್ ಬೋಳಿಯಮಜಲ್ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅಕ್ಷರ್ ಬೋಳಿಯಮಜಲ್ ನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಅಕ್ಷರ್ ಬೋಳಿಯಮಜಲ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮದ ವಿರುದ್ದ ಹಾಗೂ ಯೇಸುಕ್ರಿಸ್ತರ ಕುರಿತು ತೀರ ಕೀಳು ಅಭಿರುಚಿಯ ಮಾತುಗಳಿಂದ ನಿಂದಿಸಿದ ಬರಹವನ್ನು ಪ್ರಕಟಿಸಿದ್ದ. ಅಲ್ಲದೆ ಮದರ್ ತೆರಸಾ ಅವರನ್ನು ಕೂಡ ತೀರಾ ನಿಂದನಾತ್ಮಕವಾಗಿ ಬರೆದು ಫೇಸ್ ಬುಕ್ ಖಾತೆಯಲ್ಲಿ ಪ್ರಕಟಿಸಿದ್ದ. ಈ ಹಿನ್ನೆಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಅಕ್ಷರ್ ಬೋಳಿಯಮಜಲ್ ನನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಕ್ರೈಸ್ತ ಸಂಘಟನೆಗಳು ನಗರ ಪೋಲಿಸ್ ಕಮೀಷನರ್ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಅಕ್ಷರ್ ಬೋಳಿಯಮಜಲ್ ಅವರನ್ನು ಸುಳ್ಯದಲ್ಲಿ ಬಂಧಿಸಿದ್ದಾರೆ.
You must be logged in to post a comment Login