LATEST NEWS
ಮಾತೃಪೂರ್ಣ ಯೋಜನೆ ನಿಲ್ಲಿಸಲ್ಲ ಇದೊಂದು ಯಶಸ್ವಿ ಯೋಜನೆ – ಸಚಿವೆ ಜಯಮಾಲಾ
ಮಾತೃಪೂರ್ಣ ಯೋಜನೆ ನಿಲ್ಲಿಸಲ್ಲ ಇದೊಂದು ಯಶಸ್ವಿ ಯೋಜನೆ – ಸಚಿವೆ ಜಯಮಾಲಾ
ಉಡುಪಿ ಅಗಸ್ಟ್ 6: ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ಆಯ್ಕೆ ಆದ ಬಳಿಕ ಇದೇ ಮೊದಲ ಬಾರಿಗೆ ಉಡುಪಿಗೆ ಜಯಮಾಲ ಆಗಮಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯೂ ಆಗಿರುವ ಜಯಮಾಲ ಉಡುಪಿಗೆ ಆಗಮಿಸಿದ ಸಂದರ್ಭ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗೌರವ ಆಧಾರಗಳಿಂದ ಸ್ವಾಗತಿಸಿದರು.
ನಂತರ ನೇರವಾಗಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ನವಗ್ರಹ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ ಪರ್ಯಾಯ ವಿದ್ಯಾಧೀಶ ತೀರ್ಥ ಶ್ರೀಗಳ ಆಶೀರ್ವಾದ ಪಡೆದ ಸಚಿವೆ ಜಯಮಾಲಗೆ ಶ್ರೀಗಳು ಅನುಗ್ರಹ ಮಂತ್ರಾಕ್ಷತೆ ನೀಡಿ ಗೌರವಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಮಾಲ ರಾಜ್ಯ ಸರಕಾರ ರೂಪಿಸಿದ ಯೋಜನೆಗಳನ್ನು ಜಾರಿಗೆ ತರುವುದು ಆದ್ಯತೆಯಾಗಿದ್ದು, ಎಲ್ಲರ ಜೊತೆಯಾಗಿ ಸರ್ಕಾರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು. ಉಡುಪಿ ಜಿಲ್ಲೆ ನನಗೆ ಅಪರಿಚಿತವಲ್ಲ ಇಲ್ಲಿ ನಮ್ಮ ನಾಯಕರಿದ್ದಾರೆ ಎಲ್ಲರ ಅಭಿಪ್ರಾಯ ಕೇಳುವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿದ್ದರೂ ಯಾವುದೇ ಸವಾಲು ಎನಿಸದು ಎಲ್ಲಾ ಶಾಸಕರ ಜೊತೆಯಾಗಿ ಸರಕಾರದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ಮಾತೃಪೂರ್ಣ ಯೋಜನೆ ನಿಲ್ಲಿಸಲ್ಲ ಇದೊಂದು ಯಶಸ್ವಿ ಯೋಜನೆಯಾಗಿದ್ದು ಇದನ್ನು ನಿಲ್ಲಿಸುವ ಯಾವುದೇ ಉದ್ದೇಶ ಸರಕಾರದ ಮುಂದೆ ಇಲ್ಲ ಎಂದರು.