Connect with us

    DAKSHINA KANNADA

    ಮಂಗಳೂರು: ಫುಟ್‌ಪಾತ್‌ನಲ್ಲಿ ಕಟ್ಟಡ ತ್ಯಾಜ್ಯ ಸುರಿದವನಿಗೆ ಪಾಲಿಕೆಯಿಂದ 4 ಸಾವಿರ ದಂಡ..!

    ಕಟ್ಟಡ ತ್ಯಾಜ್ಯವನ್ನು ಫುಟ್‌ಪಾತ್‌ಗೆ ಎಸೆದ ವ್ಯಕ್ತಿಗೆ ಮಂಗಳೂರು ಪಾಲಿಕೆ ಘನತ್ಯಾಜ್ಯ ನಿರ್ವಹಣೆ ಉಪವಿಧಿ ಉಲ್ಲಂಘನೆ ಪ್ರಕರಣದಡಿ 4,000 ರೂಪಾಯಿ ದಂಡ ವಿಧಿಸಿ, ಮೊತ್ತ ವಸೂಲಿ ಮಾಡಿದೆ.

    ಮಂಗಳೂರು:  ಕಟ್ಟಡ ತ್ಯಾಜ್ಯವನ್ನು ಫುಟ್‌ಪಾತ್‌ಗೆ ಎಸೆದ ವ್ಯಕ್ತಿಗೆ ಮಂಗಳೂರು ಪಾಲಿಕೆ ಘನತ್ಯಾಜ್ಯ ನಿರ್ವಹಣೆ ಉಪವಿಧಿ ಉಲ್ಲಂಘನೆ ಪ್ರಕರಣದಡಿ 4,000 ರೂಪಾಯಿ ದಂಡ ವಿಧಿಸಿ, ಮೊತ್ತ ವಸೂಲಿ ಮಾಡಿದೆ.

    ಪ್ರಶಾಂತ್ ಶೇಟ್ ಎಂಬಾತ ಕಟ್ಟಡ ತ್ಯಾಜ್ಯವನ್ನು ತಂದು ಫುಟ್ ಪಾತ್ ನಲ್ಲಿ ಸುರಿದಿದ್ದರು.

    ಈ ಬಗ್ಗೆ ಸಾರ್ವಜನಿಕರು ಪಾಲಿಕೆಗೆ ದೂರು ನೀಡಿದ್ದರು. ಪಾಲಿಕೆ ಅಧಿಕಾರಿಗಳು ಸ್ವಚ್ಛತಾ ದರವೆಂದು 4 ಸಾವಿರ ದಂಡ ವಸೂಲು ಮಾಡಿದೆ.

    ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಯಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಿರುವುದರಿಂದ ನಗರದ ವಿವಿಧ ಸ್ಥಳಗಳಲ್ಲಿ ತ್ಯಾಜ್ಯಗಳ ಬ್ಲ್ಯಾಕ್ ಉಂಟಾಗುತ್ತದೆ.

    ಇದರಿಂದ ನಗರದ ಸೌಂದರ್ಯ ಹಾಗೂ ಸ್ವಚ್ಛತೆಗೆ ದಕ್ಕೆಯಾಗುತ್ತಿದೆ.

    ಈ ರೀತಿಯ ಅನಧಿಕೃತ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಹಾಗೂ ಸೌಂದರ್ಯಕ್ಕೆ ಹಾಗೂ ಸ್ವಚ್ಛತೆಗೆ ದಕ್ಕೆ ತರುವವರ ವಿರುದ್ದ ದಂಡ ವಿಧಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.

    ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.

    ಈ ಬಗ್ಗೆ ಎಚ್ಚರ ವಹಿಸುವಂತೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply