KARNATAKA
ಮಂಗಳೂರು : ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿ ಪೋಸ್ಟ್-ಬಿಜೆಪಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ..!

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿ ವಿಕೃತಿ ಮೆರೆದ ಬಿಜೆಪಿ ವಿರುದ್ದ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಮಂಗಳೂರು : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿ ವಿಕೃತಿ ಮೆರೆದ ಬಿಜೆಪಿ ವಿರುದ್ದ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ನಗರದ ಲಾಲ್‌ಭಾಗ್ ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಬಿಜೆಪಿಯ ವಿರುದ್ದ ಕಿಡಿಕಾರಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ರಮನಾಥ ರೈ ರಾಹುಲ್ ಗಾಂಧಿ ಓರ್ವ ಮುಗ್ದ ಮನಸ್ಸಿನ ದೇಶದ ನಾಯಕ ಆದ್ರೆ ಬಿಜೆಪಿ ರಾಹುಲ್ ಗಾಂಧಿಯನ್ನು ಕಳೆದ ಆನೇಕ ವರ್ಷಗಳಿಂದ ಟೀಕೆ, ಅಪಹಾಸ್ಯ ಮಾಡುತ್ತಾ ಬಂದಿದೆ.
ಸಂಸತ್‌ನಿಂದ ಕೂಡ ಅವರನ್ನ ಹೊರ ಹಾಕುವ ಮೂಲಕ ಬಿಜೆಪಿ ಅವಮಾನಿಸಿದೆ.
ಇದು ಖಂಡನಾರ್ಹವಾಗಿದ್ದು ದೇಶದ ಜನ ಇದನ್ನು ಗಮನಿಸುತ್ತಿದ್ದಾರೆ .
ರಾಹುಲ್ ಗಾಂಧಿಯನ್ನು ರಾವಣನ ತಲೆಗೆ ಹೋಲಿಸಿ ಅಪಹಾಸ್ಯ ಮಾಡಿದ್ದು ಈ ತಲೆ ಪ್ರಧಾನಿ ಮೋದಿಗೆ ಹೆಚ್ಚು ಸೂಕ್ತ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೋ, ಐವನ್ ಡಿಸೋಜಾ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಆಳ್ವಾ, ಶಶಿಧರ ಹೆಗ್ಡೆ, ಇಬ್ರಾಹಿಂ ಕೋಡಿಜಲ್, ಮಹಿಳಾ ನಾಯಕಿಯಾದ ಶಾಲೆಟ್ ಪಿಂಟೊ ಮತ್ತಿತರ ನಾಯಕರು ಪಾಲ್ಗೊಂಡಿದ್ದರು.