LATEST NEWS
ದಕ್ಷಿಣಕನ್ನಡ ಜಿಲ್ಲೆಯ ಸಾಮರಸ್ಯಕ್ಕೆ ಯಾವುದೇ ತ್ಯಾಗಕ್ಕೆ ಸಿದ್ದ – ಖಾದರ್

ಮಂಗಳೂರು, ಸೆಪ್ಟೆಂಬರ್ 05 : ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡ ಬೈಕ್ ಜಾಥಾ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ಬಿಜೆಪಿ ಅಜೆಂಡಾ ಎಂದು ರಾಜ್ಯ ಆಹಾರ ಸಚಿವರಾದ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರೊಂದಿಗೆ ಪ್ರತಿಕ್ರಿಯಿಸಿರುವ ಖಾದರ್ ಎಸ್ ಡಿಪಿಐ, ಪಿಎಫ್ಐ ನಿಷೇಧ ಮಾಡಬೇಕೆಂಬ ಆಗ್ರಹದ ವಿಚಾರವನ್ನಿಟ್ಟು ಬಿಜೆಪಿ ಮಂಗಳೂರು ಚಲೋ ಹಮ್ಮಿಕೊಂಡಿದೆ. ಅದರೆ ಹತ್ತು ವರ್ಷ ಬಿಜೆಪಿ ಅಧಿಕಾರದಲ್ಲಿರುವಾಗ ಇದನ್ನು ಯಾಕೆ ನಿಷೇಧ ಮಾಡಿಲ್ಲ ಎಂದು ಸವಾಲು ಹಾಕಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆಯಲ್ಲ ನಿಷೇಧ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಅಭ್ಯರ್ಥಿ ನಿಲ್ಲಿಸಲು ಬಿಜೆಪಿಗೆ ಎಸ್ ಡಿಪಿ ಐ ಬೇಕು. ರಮಾನಾಥ ರೈ, ಪೂಜಾರಿ, ನನ್ನ ವಿರುದ್ಧ ಅಭ್ಯರ್ಥಿ ನಿಲ್ಲಿಸಲು ಎಸ್ ಡಿಪಿಐ ಬೇಕು. ಮೈಸೂರಿನಲ್ಲಿ ಪ್ರತಾಪಸಿಂಹ ಜಯಗಳಿಸಬೇಕಿದ್ದರೆ ಇದೇ ಎಸ್ ಡಿಪಿಐ ಅಭ್ಯರ್ಥಿಯೇ ಕಾರಣ. ಇವರ ರಾಜಕೀಯ ಲಾಭ ಪಡೆದು ಈಗ ನಮ್ಮನ್ನು ದೂಷಿಸುತ್ತಾರೆ. ಈಗ ಬೇರೆ ಬಂಡವಾಳ ಇಲ್ಲ, ಹಾಗಾಗಿ ಬೈಕ್ ಜಾಥಾ ನಡೆಸಿ ಮಂಗಳೂರಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ದ ತೀವೃ ವಾಗ್ದಾಳಿ ನಡೆಸಿದರು. ದಕ್ಷಿಣಕನ್ನಡ ಜಿಲ್ಲೆಯ ಸಾಮರಸ್ಯಕ್ಕೆ , ಸಹೋದರತೆಗೆ ಯಾವುದೇ ತ್ಯಾಗಕ್ಕೆ ಸಿದ್ದ ಎಂದು ಖಾದರ್ ಹೇಳಿದರು.

Video