Connect with us

DAKSHINA KANNADA

ಫಿಲ್ಡಿಗಿಳಿದು ಕಾರ್ಯಾಚರಣೆ ಶುರು ಮಾಡಿದ ಮಂಗಳೂರು ಪೊಲೀಸ್ ಕಮಿಷನರ್ : ಅನಗತ್ಯವಾಗಿ ತಿರುಗಾಡುತಿದ್ದ ವಾಹನ ವಶ

ಮಂಗಳೂರು, ಮೇ 07: ನಗರದಲ್ಲಿ ಗುರುವಾರ ರಾತ್ರಿ ನಗರ ಪೊಲೀಸ್ ಆಯುಕ್ತರು ದಿಢೀರ್ ಕಾರ್ಯಾಚರಣೆ ನಡೆಸಿ ಕಠಿಣ ಕರ್ಫ್ಯೂ ನಡುವೆ ಅನಗತ್ಯ ತಿರುಗುತ್ತಿದ್ದವರಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಬಿಸಿ ಮುಟ್ಟಿಸಿದ್ದಾರೆ‌.ಕೊರೊನಾ ಕರ್ಫ್ಯೂ ಇದ್ದರೂ ಮಂಗಳೂರು ನಗರದಲ್ಲಿ ಅನಗತ್ಯ ತಿರುಗಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವುದರಿಂದ ಶುಕ್ರವಾರದಿಂದ ಕೊರೊನಾ ಕರ್ಫ್ಯೂವನ್ನು ಬಿಗಿಗೊಳಿಸಲು ನಿರ್ಧರಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಂಗಳೂರು ನಗರದ ಕೆಪಿಟಿ ಸರ್ಕಲ್ ಬಳಿ ದಿಢೀರ್ ದಾಳಿ ನಡೆಸಿದರು.

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಲಾಗಿದೆ. ಅನಗತ್ಯ ತಿರುಗಾಡುತ್ತಿದ್ದವರ ಕಾರು, ಬೈಕ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನಗಳಲ್ಲಿ ಅನಧಿಕೃತವಾಗಿ ಅಂಟಿಸಲಾಗಿದ್ದ ಅಗತ್ಯ ಸೇವೆ ಸ್ಟಿಕರ್​ಗಳನ್ನು ಕಿತ್ತೆಗೆದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement
Click to comment

You must be logged in to post a comment Login

Leave a Reply