Connect with us

    MANGALORE

    ಶ್ರೀದೇವಿ ಫಿಜಿಯೋ ಥೆರಪಿ ಕಾಲೇಜಿನ ವಿಧ್ಯಾರ್ಥಿಗಳಿಗಾಗಿ ನಗರದಲ್ಲಿ ಟ್ರೆಜರ್ ಹಂಟ್

    ಶ್ರೀದೇವಿ ಫಿಜಿಯೋ ಥೆರಪಿ ಕಾಲೇಜಿನ ವಿಧ್ಯಾರ್ಥಿಗಳಿಗಾಗಿ ನಗರದಲ್ಲಿ ಟ್ರೆಜರ್ ಹಂಟ್

    ಮಂಗಳೂರು ಜನವರಿ 14: ಟ್ರೆಜರ್ ಹಂಟ್ ಎನ್ನುವುದೇ ಅತ್ಯಂತ ಕುತೂಹಲಕಾರಿ ಹಾಗೂ ಅತ್ಯಂತ ರೋಮಾಂಚನವನ್ನು ಮೂಡಿಸುವ ಆಟ. ಈ ಟ್ರೆಜರ್ ಹಂಟ್ ಸ್ಪರ್ಧೆಯನ್ನು ಇಂದು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಮಂಗಳೂರಿನ ಹೆಸರಾಂತ ಶ್ರೀದೇವಿ ಫಿಜಿಯೋ ಥೆರಪಿ ಕಾಲೇಜಿನ ವಿಧ್ಯಾರ್ಥಿಗಳಿಗಾಗಿ ನಗರದಲ್ಲಿ ಆಯೋಜಿಸಲಾಗಿತ್ತು.

    ಶ್ರೀದೇವಿ ವಿಧ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ನಿಧೀಶ್ ಶೆಟ್ಟಿ ಈ ಟ್ರೆಜರ್ ಹಂಟ್ ಗೆ ಚಾಲನೆ ನೀಡಿದರು. ಕಾಲೇಜಿನ 52 ತಂಡಗಳು ಈ ಟ್ರೆಜರ್ ಹಂಟ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು, ಶ್ರೀದೇವಿ ಕಾಲೇಜಿನಿಂದ ಆರಂಭಗೊಂಡ ಈ ಸ್ಪರ್ಧೆ ನಗರದ ವೈಎಂಸಿ ಆವರಣದಲ್ಲಿ ಮುಕ್ತಾಯವಾಯಿತು.

    ಈ ಸ್ಪರ್ಧೆಯಲ್ಲಿ ಭಾಗವಹಿಸಿದ 52 ತಂಡಗಳಿಗೆ ನಗರದಲ್ಲಿ ಕಾರ್ಯಕ್ರಮ ಆಯೋಜಕರು ಅವಿತಿಟ್ಟ ವಸ್ತುಗಳನ್ನು ಹುಡುಕುವ ಸ್ಪರ್ಧೆ ಇದಾಗಿತ್ತು. ಕಾಲೇಜಿನ ಫಿಸಿಯೋಥೆರಪಿ ವಿಭಾಗದ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply