Connect with us

LATEST NEWS

ಮಂಗಳೂರು – ಶಾಸಕರ ಮಾತಿಗೆ ಕ್ಯಾರೆ ಅನ್ನದ ಅಧಿಕಾರಿಗಳು..ಪ್ರತಿಭಟನೆಯ ಎಚ್ಚರಿಕೆ ನೀಡಿದ ಶಾಸಕರು

Share Information

ಮಂಗಳೂರು ಅಗಸ್ಟ್ 10 : ಕಾಂಗ್ರೇಸ್ ಸರಕಾರ ಬಂದ ಮೇಲೆ ಅಧಿಕಾರಿಗಳು ನಮ್ಮ ಮಾತನ್ನು ಕೇಳುವುದಿಲ್ಲ, ಅಲ್ಲದೆ ಶಾಸಕರಿಗೆ ಅಧಿಕಾರಿಗಳು ಮರ್ಯಾದಿಯೇ ನೀಡುತ್ತಿಲ್ಲ ಎಂದು ಮೂಡಬಿದಿರೆ ಹಾಗೂ ಬಂಟ್ವಾಳ ಶಾಸಕರು ಆರೋಪಿಸಿದ್ದಾರೆ.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಸಕರ ಹಕ್ಕುಗಳಿಗೆ‌ ಚ್ಯುತಿ ತರುವ ಘಟನೆಗಳು ನಡೆಯುತ್ತಿವೆ. ವಿರೋಧ ಪಕ್ಷದ ಶಾಸಕರನ್ನು ಅಧಿಕಾರಿಗಳ ಮೂಲಕ ದಮನಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಮುಂದಿನ ಮೂರು ದಿನಗಳ ಒಳಗಾಗಿ ಕ್ರಮ‌ಕೈಗೊಳ್ಳದಿದ್ದರೆ ಆಗಸ್ಟ್ 14ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ‌ ಎದುರು ಧರಣಿ ನಡೆಸುತ್ತೇವೆ’ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜ್ಯದಲ್ಲಿ ನೂತನ‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿವೆ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಇರುವೈಲು ಗ್ರಾಮ‌ ಪಂಚಾಯಿತಿಯ ಕಚೇರಿ ಉದ್ಘಾಟನೆ ಕಾರ್ಯಕ್ರಮ ವನ್ನು ಜುಲೈ 31ರಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಿಗದಿಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ಶಿಷ್ಟಾಚಾರ ಉಲ್ಲಂಘನೆ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಗ್ರೇಡ್ -2 ಕಾರ್ಯದರ್ಶಿ, ಪಂಚಾಯಿತಿಯ ಪ್ರಭಾರಿ ಅಭಿವೃದ್ಧಿ ಅಧಿಕಾರಿ ಅವರನ್ನು ಅಮಾನತುಗೊಳಿಸಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿದಾಗಲೂ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿ ಇದನ್ನು ಹಿಂಪಡೆಯಲು ಸೂಚಿಸಿದರೂ ಈ ಆದೇಶಕ್ಕೆ ಬೆಲೆ ನೀಡಿಲ್ಲ’ ಎಂದು ಆರೋಪಿಸಿದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲೂ ಇಂತಹುದೇ ಘಟನೆ ನಡೆದಿದೆ. ಈ ಬಗ್ಗೆ ವಿವರ ಕೇಳಿದರೆ ಮೇಲಧಿಕಾರಿಗಳ ಸೂಚನೆ ಎಂಬ ಹಾರಿಕೆ ಉತ್ತರ ಬರುತ್ತದೆ. ಕ್ಷೇತ್ರದಲ್ಲಿ ಶಾಸಕರಿಗೆ ಕೆಲಸ ಮಾಡಲು ಆಗದ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಈ‌ ಬಗ್ಗೆ ಗಮನ ಹರಿಸಿ, ತಪ್ಪನ್ನು ಸರಿಪಡಿಸದಿದ್ದಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಧರಣಿ ನಡೆಸುತ್ತೇವೆ ಎಂದರು.


Share Information
Advertisement
Click to comment

You must be logged in to post a comment Login

Leave a Reply