Connect with us

LATEST NEWS

ಪೊಲೀಸ್ ಎಂದು ನಂಬಿಸಿ ವಿಧ್ಯಾರ್ಥಿನಿಯ ಅತ್ಯಾಚಾರ..ನಗ್ನ ಫೋಟೋ ವೈರಲ್ ಮಾಡಿದ ನಾಟಕ ಕಲಾವಿದ ಅರೆಸ್ಟ್

Share Information

ಮಂಗಳೂರು ,ಅಗಸ್ಟ್ 10: ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಆಕೆಗೆ ತಾನು ಪೊಲೀಸ್ ಎಂದು ನಂಬಿಸಿ ಆಕೆಯ ಅತ್ಯಚಾರ ಮಾಡಿದಲ್ಲದೇ ಆಕೆಯ ನಗ್ನ ಪೋಟೋಗಳನ್ನು ವೈರಲ್ ಮಾಡಿದ ಆರೋಪದ ಮೇಲೆ ನಾಟಕ ಕಲಾವಿದನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಬಂಧಿತನನ್ನು ರಾಯಚೂರು ಮೂಲದ ಯಮನೂರ (22) ಎಂದು ಗುರುತಿಸಲಾಗಿದೆ. ಈತ ನಗರದ ಇಂಜಿನಿಯರಿಂಗ್ ಕಾಲೇಜಿನ 19ರ ಹರೆಯದ ವಿದ್ಯಾರ್ಥಿನಿಯನ್ನು ಇನ್ಸ್ಟಾಗ್ರಾಮ್ ಮೂಲಕ ಗೆಳೆತನ ಮಾಡಿ ಕೊಂಡ ಆರೋಪಿಯು ತನ್ನನ್ನು ವಾಮಂಜೂರು ಠಾಣೆಯ ಎಸ್ಸೈ ಎಂದು ಪರಿಚಯ ಮಾಡಿಕೊಂಡ. ಅಲ್ಲದೆ 2023ರ ಮೇ ತಿಂಗಳಲ್ಲಿ ನಗರದ ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿ ಬಳಿಕ ತಣ್ಣೀರುಬಾವಿಯ ಬೀಚ್‌ಗೆ ಕರೆದೊಯ್ದು ಫೋಟೊ ತೆಗೆದುಕೊಂಡು ಬಳಿಕ ಅದನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೆ ಬೆಂಗಳೂರು ಮತ್ತು ಕಿನ್ನಿಗೋಳಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ ಆ ಫೋಟೊಗಳನ್ನು ಆಕೆಯ ಮನೆಯವರಿಗೆ ಮತ್ತು ಸ್ನೇಹಿತರ ಮೊಬೈಲ್‌ಗೆ ಕಳುಹಿಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೊಗಳನ್ನು ಅಳಿಸಿ ಹಾಕಬೇಕಿದ್ದರೆ 1.50 ಲಕ್ಷ ರೂ. ನೀಡಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವಿದ್ಯಾರ್ಥಿನಿಯು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದು, ಬುಧವಾರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಬೀದಿ ನಾಟಕ ಕಲಾವಿದನಾಗಿದ್ದು, ಹಾಗಾಗಿ ಆತನು ಪೊಲೀಸ್ ಸಮವಸ್ತ್ರ ಹೊಂದಿದ್ದ. ಕೃತ್ಯಕ್ಕೆ ಇದೇ ಸಮವಸ್ತ್ರವನ್ನು ಬಳಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Share Information
Advertisement
Click to comment

You must be logged in to post a comment Login

Leave a Reply