LATEST NEWS
ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮದ್ವಶಂಕರರ ಹೆಸರಿಡಲು ಆಗ್ರಹ

ಉಡುಪಿ ನವೆಂಬರ್ 26: ಮಂಗಳೂರು ವಿಮಾನ ನಿಲ್ದಾಣಕ್ಕೆ ಮರುನಾಮಕರಣ ವಿವಾದಕ್ಕೆ ಈಗ ಪಕ್ಕದ ಜಿಲ್ಲೆ ಉಡುಪಿ ಎಂಟ್ರಿಯಾಗಿದ್ದು, ಈ ಬಾರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವಶಂಕರರ ಹೆಸರಡಿಲು ಆಗ್ರಹ ಕೇಳಿ ಬಂದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಂಬೈ ಮೂಲದ ಅದಾನಿ ಕಂಪೆನಿಗೆ ನಿರ್ವಹಣೆಗೆ 50 ವರ್ಷಗಳಿಗೆ ಹಸ್ತಾಂತರ ಮಾಡಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್ ಈಗಾಗಲೇ ಇದಕ್ಕೆ ಅದಾನಿ ಹೆಸರು ತೆಗೆದು ಕೋಟಿ ಚೆನ್ನಯ್ಯ ಹೆಸರು ಇಡಬೇಕು ಎನ್ನುವ ಆಗ್ರಹ ಮಂಡಿಸಿದ್ದರೆ, ಉಳ್ಳಾಲದ ರಾಣಿ ಅಬ್ಬಕ್ಕ ಸಮಿತಿ ಸದಸ್ಯರು ವೀರ ರಾಣಿ ಅಬ್ಬಕ್ಕಳ ಹೆಸರನ್ನು ಏರ್ಪೋರ್ಟಿಗೆ ಇಡಿ ಎಂದು ಒತ್ತಾಯಿಸಿದೆ.

ಈ ನಡುವೆ ಸಾಮಾಜಿಕ ಸಂಘಟನೆಗಳ ಮುಖಂಡರು ಇದಕ್ಕೆ ತುಳುನಾಡ ಏರ್ಪೋರ್ಟ್, ಶ್ರೀನಿವಾಸ ಮಲ್ಯರ ಹೆಸರನ್ನಿಡಿ ಎನ್ನುವ ಆಗ್ರಹ ಕೇಳಿ ಬಂದಿತ್ತು. ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮದ್ವ ಶಂಕರ ವಿಮಾನ ನಿಲ್ದಾಣ ಹೆಸರಿಡುವಂತೆ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಒತ್ತಾಯ ಮಾಡಿದ್ದಾರೆ.
ಮಂಗಳೂರು ಸಮೀಪದಲ್ಲಿ ಉಡುಪಿ ಹಾಗೂ ಶೃಂಗೇರಿ ಕ್ಷೇತ್ರ ಇದೆ. ಜಗದ್ಗುರು ಶಂಕರಾಚಾರ್ಯರು ಶೃಂಗೇರಿ, ಮಧ್ವಾಚಾರ್ಯರು ಉಡುಪಿ ಕೃಷ್ಣ ಮಠ ಸ್ಥಾಪಿಸಿದ್ದಾರೆ. ಹೀಗಾಗಿ ಶ್ರೀ ಮದ್ವಶಂಕರ ವಿಮಾನ ನಿಲ್ದಾಣ ಹೆಸರಿಡುವುದು ಅರ್ಥ ಪೂರ್ಣ. ಅಯೋಧ್ಯೆಯ ವಿಮಾನ ನಿಲ್ದಾಣನಕ್ಕೆ ಶ್ರೀರಾಮನ ಹೆಸರಿಡಲಾಗಿದೆ. ಇಲ್ಲಿ ಮಧ್ವ ಶಂಕರ ಹೆಸರಿಟ್ಟರೆ ದಾರ್ಶನಿಕ ಪರಂಪರೆಗೆ ಗೌರವ ಸಂದಂತೆ ಆಗುತ್ತದೆ ಎಂದರು. ಇನ್ನು ಆಧ್ಯಾತ್ಮಿಕತೆಯೇ ಭಾರತದ ಮೂಲ ಸಂಪತ್ತು ಆಗಿದೆ. ರಾಮಾನುಜಾಚಾರ್ಯ, ಬಸವಣ್ಣ ಮೂಲ ಊರುಗಳ ಸಮೀಪದ ವಿಮಾನಕ್ಕೂ ಅವರುಗಳ ಹೆಸರಿಡುವಂತೆ ಸಲಹೆಯನ್ನು ಅವರು ನೀಡಿದ್ದಾರೆ.