BANTWAL
ಎರಡು ತಂಡಗಳ ನಡುವಿನ ಗಲಾಟೆ ಓರ್ವನಿಗೆ ಚೂರಿ ಇರಿತ
ಎರಡು ತಂಡಗಳ ನಡುವಿನ ಗಲಾಟೆ ಓರ್ವನಿಗೆ ಚೂರಿ ಇರಿತ
ಮಂಗಳೂರು ಫೆಬ್ರವರಿ 22: ಎರಡು ತಂಡಗಳ ನಡುವೆ ನಡೆದ ಗಲಾಟೆಯಲ್ಲಿ ಯುವಕನಿಗೆ ಚೂರಿ ಇರಿತ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಗಡಿ ಪ್ರದೇಶ ಫರಂಗಿ ಪೇಟೆಯಲ್ಲಿ ಈ ನಡೆದ ಘಟನೆ ನಡೆದಿದ್ದು, ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಜಗಳ ಚಾರಕಕ್ಕೇರಿ ಯುವಕನಿಗೆ ಚೂರಿ ಇರಿಯಲಾಗಿದೆ.
ಘಟನೆಗೆ ವೈಯುಕ್ತಿಕ ದ್ವಷವೇ ಕಾರಣ ಎಂದು ಹೇಳಲಾಗಿದೆ. ಚೂರಿ ಇರಿತಕ್ಕೊಳಗಾದ ಯುವಕನನ್ನು ಫರಂಗಿಪೇಟೆಯ ಇರ್ಫಾನ್ ಎಂದು ಗುರುತಿಸಲಾಗಿದೆ. ಇರ್ಫಾನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆ ಎಸ್ಪಿ ರವಿಕಾಂತೇಗೌಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login