ಕಡಲ ತೀರದಲ್ಲಿ ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆ
ಮಂಗಳೂರು ಫೆಬ್ರವರಿ 22: ಬೃಹತ್ ಗಾತ್ರದ ತಿಮಿಂಗಿಲದ ಮೃತದೇಹ ಸುರತ್ಕಲ್ ಕರಾವಳಿ ತೀರದಲ್ಲಿ ಪತ್ತೆಯಾಗಿದೆ.
ಮಂಗಳೂರು ಸಮೀಪದ ಸುರತ್ಕಲ್ ದೊಡ್ಡಕೊಪ್ಲ ಕಡಲ ತೀರದಲ್ಲಿ ಈ ತಿಮಿಂಗಿಲದ ಮೃತ ದೇಹ ಪತ್ತೆಯಾಗಿದ್ದು, ಸ್ಥಳೀಯರು ಬೆಳಗ್ಗಿನ ವಾಯುವಿಹಾರಕ್ಕೆ ಸಮುದ್ರದ ದಡಕ್ಕೆ ಹೋದ ಸಂದರ್ಭದಲ್ಲಿ ಮೃತ ತಿಮಿಂಗಿಲದ ದರ್ಶನವಾಗಿದೆ.

ಈ ತಿಮಿಂಗಿಲ ಕೆಲ ದಿನಗಳ ಹಿಂದೆ ಮೃತಪಟ್ಟಿದೆ ಎಂದು ಹೇಳಲಾಗಿದ್ದು, ಕೆಲ ದಿನಗಳ ಬಳಿಕ ಸಮುದ್ರದ ದಡ ಸೇರಿದೆ. ಮೃತ ತಿಮಿಂಗಿಲವನ್ನ ನೋಡಲು ಜನ ತಂಡೋಪತಂಡವಾಗಿ ತೀರಕ್ಕೆ ಬಂದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಮೃತದೇಹ ಕೊಳೆತು ನಾರುತ್ತಿದ್ದು ಮಹಾನಗರ ಪಾಲಿಕೆ ಮಣ್ಣು ಮಾಡಲಿದೆ.

ಒಂದು ತಿಂಗಳ ಬಳಿಕ ಪಣಂಬೂರು ಬೀಚ್ ಅಭಿವೃದ್ಧಿ ಮಂಡಳಿ ತಿಮಿಂಗಿಲದ ಅಸ್ಥಿಪಂಜರವನ್ನು ಹೊರ ತೆಗೆದು ವಸ್ತು ಸಂಗ್ರಹಾಲಯಕ್ಕೆ ನೀಡಲು ತೀರ್ಮಾನಿಸಿದೆ.
