Connect with us

FILM

ನೇಣಿಗೆ ಶರಣಾದ ಮಲೆಯಾಳಂ ನಟಿ ರೆಂಜೂಷಾ ಮೆನನ್

ಕೇರಳ ಅಕ್ಟೋಬರ್ 30: ಮಲೆಯಾಳಂ ನಟಿಯೊಬ್ಬರು ತಮ್ಮ ಫ್ಲ್ಯಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಮೃತ ನಟಿಯನ್ನು ರೆಂಜೂಷಾ ಮೆನನ್ (35) ಎಂದು ಗುರುತಿಸಲಾಗಿದ್ದು, ಅವರು ತಿರುವನಂತಪುರಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.


ದೂರದರ್ಶನ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಾಲಿಡುವ ಮೊದಲು ರೆಂಜೂಷಾ ದೂರದರ್ಶನ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸೆಲೆಬ್ರಿಟಿ ಟಿವಿ ಶೋನಲ್ಲಿ ಭಾಗವಹಿಸಿದ್ದು ಅವಳಿಗೆ ಮನ್ನಣೆ ತಂದುಕೊಟ್ಟಿತು. ಅವರು ಧಾರಾವಾಹಿಗಳಾದ ‘ಸ್ತ್ರೀ’, ‘ನಿಜಾಲಟ್ಟಂ’, ‘ಮಗಳುದೆ ಅಮ್ಮ’ ಮತ್ತು ‘ಬಾಲಾಮಣಿ’ ಗಳಲ್ಲಿ ನಟಿಸಿದ್ದರು ಅಲ್ಲದೆ ಮಲೆಯಾಳಂ ಸಿನೆಮಾಗಳಾದ ‘ಸಿಟಿ ಆಫ್ ಗಾಡ್’, ‘ಬಾಂಬೆ ಮಾರ್ಚ್ 12’, ‘ಲಿಸಮ್ಮಾಯುಡೆ ವೀಡು’, ‘ಅದ್ಭುತ ದ್ವೀಪ’, ಮತ್ತು ‘ಕಾರ್ಯಸ್ಥಾನ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.


ಕೆಲವು ವರದಿಗಳ ಪ್ರಕರಾ ನಟಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply