KARNATAKA
ಬೆಂಗಳೂರು ಲುಲು ಮಾಲ್ ನಲ್ಲಿ ಯುವತಿಯನ್ನು ಅಶ್ಲೀಲವಾಗಿ ಮುಟ್ಟಿದ ವ್ಯಕ್ತಿ – ವಿಡಿಯೋ ವೈರಲ್
ಬೆಂಗಳೂರು ಅಕ್ಟೋಬರ್ 30 : ಬೆಂಗಳೂರಿನ ಲುಲು ಮಾಲ್ ನಲ್ಲಿ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ಯುವತಿಯನ್ನು ಅಶ್ಲೀಲವಾಗಿ ಸ್ಪರ್ಶಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಲುಲು ಮಾಲ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಮಾಲ್‌ನಲ್ಲಿ ಯುವತಿಯೊಬ್ಬಳು ನಡೆದು ಬರುವಾಗ ವ್ಯಕ್ತಿಯೊಬ್ಬ ಬೇಕಂತಲೇ ಹಿಂದಿನಿಂದ ಹೋಗಿ ಆಕೆಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು, ಆಕೆಯನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಬಳಿಕ ತನಗೇನೂ ತಿಳಿದಿಲ್ಲ ಎಂಬಂತೆ ಆಲ್ಲಿಂದ ಪರಾರಿಯಾಗಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದೆ.
ನಗರದ ಲುಲು ಮಾಲ್‌ನಲ್ಲಿ ಭಾನುವಾರ ಅಂದರೆ ಅ. 29ರ ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ಕಾಣುತ್ತಿರುವ ಈ ವ್ಯಕ್ತಿ ಮಾಲ್‌ಗೆ ಬಂದ ಮಹಿಳೆಯರು ಮತ್ತು ಹುಡುಗಿಯರ ಹಿಂದೆ ಓಡಾಡುತ್ತಿದ್ದ. ಮೊದಲಿಗೆ ಅವನು ಜನನಿಬಿಡ ಪ್ರದೇಶದಲ್ಲಿ ಇದ್ದುದನ್ನು ನೋಡಿದ ನಾನು ಅನುಮಾನಗೊಂಡು ವಿಡಿಯೊ ರೆಕಾರ್ಡ್ ಮಾಡುತ್ತಾ ಹಿಂಬಾಲಿಸಿದೆ. ಈ ವೇಳೆ ಹುಡುಗಿಯೊಬ್ಬಳ ಹಿಂಭಾಗ ಮುಟ್ಟುವುದು ಮಾಡುತ್ತಿದ್ದ.
ಕೂಡಲೇ ಈ ಬಗ್ಗೆ ಸೆಕ್ಯುರಿಟಿಗೆ ಹೋಗಿ ದೂರು ನೀಡಿದ್ದು, ಆತನನ್ನು ಹುಡುಕಿಕೊಂಡು ಬಂದಾಗ ತಪ್ಪಿಸಿಕೊಂಡಿದ್ದ. ಸದ್ಯ ಮಾಲ್ ಆಡಳಿತ ಮಂಡಳಿ ಮತ್ತು ಸೆಕ್ಯೂರಿಟಿಗೆ ಮಾಹಿತಿ ನೀಡಿದ್ದು, ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಆತ ಬರೆದುಕೊಂಡಿದ್ದಾರೆ.
The video of a young woman being sexually harassed by an elderly man at a mall in #Bengaluru went viral on social media following which the #BengaluruPolice began a probe.
The video shows the accused man deliberately touching the back of the woman at the games zone in the… pic.twitter.com/eOSf3prNR8
— Hate Detector 🔍 (@HateDetectors) October 30, 2023
You must be logged in to post a comment Login