Connect with us

    LATEST NEWS

    ವಿಡಿಯೋ : ಚಲಿಸುತ್ತಿದ್ದ ಬಸ್ ಗೆ ತಲೆಯಿಂದ ಡಿಚ್ಚಿ ಹೊಡೆದು ಗ್ಲಾಸ್ ಪುಡಿ ಮಾಡಿದ ಯುವಕ

    ಕೇರಳ ನವೆಂಬರ್ 10: ಚಲಿಸುತ್ತಿದ್ದ ಬಸ್ಸಿನ ಮುಂಭಾಗದ ಗಾಜುಗೆ ಯುವಕನೊಬ್ಬ ಹಾರಿ ತಲೆಯಿಂದ ಗಾಜು ಒಡೆದು ಹಾಕಿರುವ ವಿಲಕ್ಷಣ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ ಪೆರಿಂತಲ್ ಮನ್ನಾದಲ್ಲಿ ಜುಬಿಲಿ ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ.


    ಖಾಸಗಿ ಬಸ್​ ಮಂಕಡಾ ಕಡೆಗೆ ತೆರಳುತ್ತಿತ್ತು. ಈ ವೇಳೆ ಬಸ್​ ಎದುರಿಗೆ ಓಡಿ ಬಂದು, ಮೇಲಕ್ಕೆ ಜಿಗಿದು ತಲೆಯಿಂದ ಡಿಕ್ಕಿ ಹೊಡೆದು ವಿಂಡ್​ಶೀಲ್ಡ್​ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಬಸ್​ ಗುದ್ದಿದ ರಭಸಕ್ಕೆ ಯುವಕನು ಕೂಡ ಕೊಂಚ ದೂರ ಹಾರಿ ಬಿದ್ದಿದ್ದಾನೆ. ಕೆಲ ಸೆಕೆಂಡ್​ಗಳ ಕಾಲ ನೆಲದ ಮೇಲೆಯೇ ಬಿದ್ದಿದ್ದ ಯುವಕ, ಬಳಿಕ ಎದ್ದು ಬಂದು ಬಸ್​ ಏರಿದ್ದಾನೆ. ಡ್ರೈವರ್​ ಸೀಟ್​ ಮೇಲೆ ಕುಳಿತು ತನ್ನ ಎರಡೂ ಕಾಲುಗಳನ್ನು ಸ್ಟೀರಿಂಗ್​ ಮೇಲೆ ಇಟ್ಟು ಕೆಲಕಾಲ ಬಸ್​ನಲ್ಲಿದ್ದವರನ್ನು ಪೀಡಿಸಿದ್ದಾರೆ.

    ಯುವಕ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಕಾರಣ ಪೊಲೀಸರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಬ್ರೆಜಿಲ್ ಫುಟ್ಬಾಲ್ ತಾರೆ ನೇಮಾರ್ ಅವರ ದೊಡ್ಡ ಅಭಿಮಾನಿ ಎಂದು ತಿಳಿದು ಬಂದಿದ್ದು, ಮತ್ತು ಬಸ್ ನ ಕಲರ್ ಅರ್ಜೆಂಟೀನಾ ಫುಟ್ಬಾಲ್ ತಂಡದ ಬಣ್ಣವಾಗಿದ್ದ ಕಾರಣ ಅವನು ಬಸ್ ನ ಗ್ಲಾಸಿಗೆ ‘ಹೆಡ್’ ಮಾಡಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply