Connect with us

    LATEST NEWS

    ಚೆನ್ನೈ – ಮೆಡಿಕಲ್ ವಿಧ್ಯಾರ್ಥಿಗಳ ಅರೆಬೆತ್ತಲೆ ರಾಗಿಂಗ್ ವಿಡಿಯೋ ….!!

    ಚೆನ್ನೈ: ಸಿನಿಯರ್ ವಿಧ್ಯಾರ್ಥಿಗಳು ಜೂನಿಯರ್ ಗಳನ್ನು ಬಟ್ಟೆ ಬಿಚ್ಚಿಸಿ ಅರೆಬೆತ್ತಲೆಯಾಗಿ ರಾಗಿಂಗ್ ಮಾಡಿರುವ ಘಟನೆ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿನಲ್ಲಿ ನಡೆದಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಿಎಂಸಿ ಮೆಡಿಕಲ್‌ ಕಾಲೇಜಿನ ಏಳು ಹಿರಿಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.


    ವಿದ್ಯಾರ್ಥಿಗಳು ಅರೆಬೆತ್ತಲೆಯಾಗಿ ರಾಗಿಂಗ್‌ಗೆ ಒಳಗಾಗಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಸಂಬಂಧ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದು, ರಾಗಿಂಗ್‌ನಲ್ಲಿ ತೊಡಗಿದವರನ್ನು ಬಂಧಿಸುತ್ತಿದ್ದಾರೆ.
    ವೈರಲ್‌ ಆಗಿರುವ ವಿಡಿಯೋದಲ್ಲಿ ಹಲವು ವಿದ್ಯಾರ್ಥಿಗಳು ಅರೆಬೆತ್ತಲೆಯಾಗಿ, ಬೆತ್ತಲೆಯಾಗಿ ಕಾಣಿಸಿಕೊಡುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಹುಲ್ಲು ಹಾಸಿನ ಮೇಲೆ ಪುಶ್‌ಅಪ್‌ ಮಾಡುತ್ತಿರುವ ದೃಶ್ಯವಿದೆ. ಈ ರೀತಿ ಪುಶ್‌ ಅಪ್‌ ಮಾಡುವ ವಿದ್ಯಾರ್ಥಿಗಳೂ ಕೂಡ ಅರೆಬೆತ್ತಲೆಯಾಗಿದ್ದಾರೆ.


    ಇನ್ನು ಕೆಲವು ಪುರುಷರು ಅರೆಬೆತ್ತಲೆಯಾಗಿ ತಬ್ಬಿಕೊಳ್ಳುವ ದೃಶ್ಯವೂ ಇದೆ. ಕೆಲವು ವಿದ್ಯಾರ್ಥಿಗಳು ನೀರಿನ ಗುಂಡಿಯಲ್ಲಿ ಈಜುವಂತೆ ವರ್ತಿಸುತ್ತಿದ್ದಾರೆ. ವಿಡಿಯೋದಲ್ಲಿ ಒಬ್ಬ ವಿದ್ಯಾರ್ಥಿಯು ಇನ್ನೊಬ್ಬ ವಿದ್ಯಾರ್ಥಿಯ ಜನನಾಂಗ ಟಚ್‌ ಮಾಡುವ ದೃಶ್ಯವೂ ಇದೆ. ಇದರೊಂದು ರಾಗಿಂಗ್‌ ಘಟನೆಯಾಗಿದ್ದು, ಹಿರಿಯ ವಿದ್ಯಾರ್ಥಿಗಳ ಒತ್ತಡಕ್ಕೆ ಕಿರಿಯ ವಿದ್ಯಾರ್ಥಿಗಳು ಈ ರೀತಿ ಮಾಡುತ್ತಿದ್ದರು ಎನ್ನಲಾಗಿದೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply