KARNATAKA
ಮೇಕಪ್ ತಂದ ಅವಾಂತರಕ್ಕೆ…ಯುವತಿಯ ಮದುವೆಯೇ ರದ್ದು…!!
ಹಾಸನ ಮಾರ್ಚ್ 04: ಮದುವೆಗಾಗಿ ಅತಿಯಾದ ಮೇಕಪ್ ಮಾಡಿಸಲು ಹೋಗಿ ಯುವತಿಯೊಬ್ಬಳ ಮದುವೆ ರದ್ದಾದ ಘಟನೆ ಅರಸೀಕೆರೆಯಲ್ಲಿ ನಡೆದಿದೆ.
ಅರಸಿಕರೆಯ ಮದುಮಗಳು ನಗರದ ಅದೊಂದು ಬ್ಯೂಟಿ ಪಾರ್ಲರ್ ಗೆ ಹೋಗಿ ಮದುವೆ ದಿನದ ಮೇಕಪ್ ಗೆ ಆರ್ಡರ್ ಮಾಡಿ, 10 ದಿನದ ಮೊದಲೇ ಮುಖದ ಕಾಂತಿ ಹೆಚ್ಚಿಸಿಕೊಳ್ಳೋಕೆ ಫೇಷಿಯಲ್ ಮಾಡಿಸಿಕೊಂಡಿದ್ದರು.
ಆದರೆ ಅದೇ ಫೇಷಿಯಲ್ ಮದುಮಗಳ ಮುಖವನ್ನೇ ವಿಕಾರ ಮಾಡಿದೆ. ಫೇಷಿಯಲ್ ಮಾಡಿದ ಬಳಿಕ ಇಡೀ ಮುಖ ಕಪ್ಪಾಗಿ ಸುಟ್ಟಂತೆ ಆಗಿದ್ದು ಮದುಮಗಳು ಹಾಗೂ ಇಡೀ ಕುಟುಂಬ ಆತಂಕಗೊಂಡಿದೆ. ಕೂಡಲೆ ಅರಸೀಕೆರೆಯ ಶಿವಕುಮಾರ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಮದುಮಗಳ ಮುಖ ಸಂಪೂರ್ಣ ವಿರೂಪಗೊಂಡಿದ್ದರಿಂದ ನಿಶ್ಚಯವಾಗಿದ್ದ ಮದುವೆ ದಿನಾಂಕವನ್ನು ರದ್ದುಮಾಡಿ ಮದುವೆಯನ್ನ ಮುಂದೂಡಲಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬ್ಯೂಟಿಷಿಯನ್ ಹಾಗೂ ಮದುಮಗಳ ಕಡೆಯವರ ರಾಜಿ ಸಂದಾನದಿಂದ ಪ್ರಕರಣ ಇತ್ಯರ್ಥವಾಗಿದೆಯಾದರೂ ನಡೆದಿರೋ ಘಟನೆಯ ಫೋಟೋಗಳು, ಎಲ್ಲೆಡೆ ವೈರಲ್ ಆಗಿದ್ದು ದೊಡ್ಡ ಸದ್ದುಮಾಡುತ್ತಿವೆ
ವೈದ್ಯರು ಚಿಕಿತ್ಸೆ ನೀಡಿದ್ದು ಇದು ಕೆಮಿಕಲ್ ರಿಯಾಕ್ಷನ್ ನಿಂದ ಆಗೋ ಅವಾಂತರಗಳು ಹಾಗಾಗಿ ಬ್ಯೂಟಿಷಿಯನ್ ಗಳು ತಮ್ಮ ಬಳಿ ಬರೋ ಗ್ರಾಹಕರ ಬಗ್ಗೆ ತಿಳಿದುಕೊಂಡು ಮೇಕಪ್ ಮಾಡಬೇಕು. ಸದ್ಯ ಈ ಯುವತಿ ಚಿಕಿತ್ಸೆ ಬಳಿಕ ಅರೋಗ್ಯವಾಗಿ ಇದ್ದಾರೆ. ಇನ್ನು ಎರಡು ಮೂರು ವಾರದಲ್ಲಿ ಅವರ ಮುಖ ಮೊದಲಿನಂತೆ ಆಗಲಿದ್ದು ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ. ಒಟ್ನಲ್ಲಿ ಮದುವೆ ದಿನ ತಾನು ಅಂದವಾಗಿ ಕಾಣಬೇಕು ಅಂತಾ ಮಾಡಿಸಿಕೊಂಡ ಮೇಕಪ್ ಆಕೆಯ ಬಾಳಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಆಗಿರೋ ಯಡವಟ್ಟು ಅರಿತ, ಸ್ವಂತ ಸಂಬಂಧಿಕರೇ ಆದ ವರನ ಕಡೆಯವರು ಮದುವೆ ದಿನಾಂಕ ಮುಂದೂಡಿ ಮದುವೆ ಮಾಡಿಕೊಳ್ಳಲು ಒಪ್ಪಿದ್ದು ಪ್ರಕರಣ ಸುಖಾಂತ್ಯವಾದಂತಾಗಿದೆ.
You must be logged in to post a comment Login