Connect with us

KARNATAKA

ವಿಜಯಪುರ: ಕೃಷ್ಣಾ ನದಿ‌ ಸೇತುವೆ ಮೇಲೆ ಮೊಸಳೆ ಪ್ರತ್ಯಕ್ಷ

ವಿಜಯಪುರ, ಮಾರ್ಚ್ 04: ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218 ರ ಕೃಷ್ಣಾ ನದಿ ಸೇತುವೆ ಮೇಲೆ ಶನಿವಾರ ಬೆಳಿಗ್ಗೆ ಬಾಯಿಗೆ ಹಗ್ಗ ಕಟ್ಟಿದ್ದ ಸ್ಥಿತಿಯಲ್ಲಿ ದೊಡ್ಡ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.

ಮೊಸಳೆ ಬಾಯಿಗೆ ಹಗ್ಗ ಕಟ್ಟಿರುವುದರಿಂದ ಆಹಾರ ಸೇವಿಸಲಾಗದೇ ನದಿಯಿಂದ ಆಚೆ ಬಂದಿರಬಹುದು ಅಥವಾ ಜನವಸತಿ‌ ಪ್ರದೇಶಕ್ಕೆ ನುಗ್ಗಿರುವಾಗ ಹಿಡಿದು ಹಗ್ಗ ಕಟ್ಟಿ ತಂದು ಇಲ್ಲಿ ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಹೆದ್ದಾರಿ ಗಸ್ತು ಪೊಲೀಸರು ಆಗಮಿಸಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಆಡಚಣೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳೀಯ ಯುವಕರ ಸಹಾಯದಿಂದ ಮೊಸಳೆಯನ್ನು ಹಗ್ಗದಿಂದ ರಸ್ತೆ ದಂಡೆಗೆ ಸರಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮೊಸಳೆ ರಕ್ಷಿಸಿ ನದಿಗೆ ಬಿಡಲಿದ್ದಾರೆ.

Advertisement
Click to comment

You must be logged in to post a comment Login

Leave a Reply