LATEST NEWS
ಮೊದಲ 3 ರ್ಯಾಂಕ್ ಪಡೆದ ಶ್ರೀ ದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳು
ಮಂಗಳೂರು ಮಾರ್ಚ್ 04: ಮಂಗಳೂರು ವಿಶ್ವವಿದ್ಯಾಲಯವು 2022ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಶ್ರೀ ದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳು ಮೊದಲ 3 ರ್ಯಾಂಕ್ ಪಡೆದು ಮೇಲುಗೈ ಸಾಧಿಸಿದ್ದಾರೆ.
ಬಿ.ಎಸ್ಸಿ ಫುಡ್ ಟೆಕ್ನಾಲಜಿ ವಿಭಾಗದಲ್ಲಿ ಮಂಗಳೂರಿನ ಸಫೀನ 1 ನೇ ರ್ಯಾಂಕ್, ಕೊಡಗಿನ ಮೇಘನಾ ಜಿ.ಪಿ 2ನೇ ರ್ಯಾಂಕ್ ಮತ್ತು ಕಾಸರಗೋಡಿನ ಭಾವನಾ ಕೆ 3ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಶಿಕ್ಷಕೇತರ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
You must be logged in to post a comment Login