Connect with us

    LATEST NEWS

    ಪಾರ್ಲಿಮೆಂಟ್ ಅಟ್ಯಾಕ್ ದಿನವೇ ಮತ್ತೊಂದು ಭದ್ರತಾಲೋಪ – ಟಿಯರ್ ಗ್ಯಾಸ್ ನೊಂದಿಗೆ ಸಂಸತ್ ಗೆ ನುಗ್ಗಿದ ಆಘಂತಕರು

    ನವದೆಹಲಿ ಡಿಸೆಂಬರ್ 13 : ಸಂಸತ್ತಿನ ಮೇಲೆ ಟೆರರ್ ಅಟ್ಯಾಕ್ ನಡೆದು 22 ವರ್ಷ ಕಳೆದ ದಿನವೇ ಇಂದು ಮತ್ತೆ ಲೋಕಸಭೆಯಲ್ಲಿ ಭಾರೀ ಭದ್ರತೆ ಲೋಪವಾಗುವ ಘಟನೆ ನಡೆದಿದೆ. ಸಂಸತ್ ಕಲಾಪ ನಡೆಯುತ್ತಿದ್ದ ವೇಳೆ ಇಬ್ಬರು ಒಳನುಸುಳಿ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಸದನದ ಸುತ್ತಲೂ ಓಡಾಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.


    ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಖಗೇನ್ ಮುರ್ಮು ಅವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನದ ಒಳನುಗ್ಗಿದ್ದಾರೆ. ಇದನ್ನು ಅಲ್ಲಿದ್ದವರು ಗಮನಿಸಿದ್ದಾರೆ. ಸುಮಾರು 20 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಸದನದ ಒಳಗೆ ನುಗ್ಗಿದ್ದಾರೆ. ಬಂಧಿತರ ಬಳಿ ಹಳದಿ ಬಣ್ಣ ಟಿಯರ್​ ಗ್ಯಾಸ್​​ ಇರುವುದು ಬೆಳಕಿಗೆ ಬಂದಿದೆ. ಇನ್ನು ಅಪರಿಚಿತ ಸದನದೊಳಗೆ ನುಗ್ಗಿದ ಪರಿಣಾಮ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.

     

    ಅಶ್ರುವಾಯು ಡಬ್ಬಿಗಳನ್ನು ಹೊತ್ತು ನುಸುಳಿದ್ದರು ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಕೂಡಲೇ ಸದನವನ್ನು ಮುಂದೂಡಲಾಯಿತು. ಶೂನ್ಯ ವೇಳೆಯಲ್ಲಿ ಒಬ್ಬರು ಅಶ್ರುವಾಯು ಎರಚುತ್ತಾ ಸಾರ್ವಜನಿಕ ಗ್ಯಾಲರಿಯಿಂದ ತೂಗಾಡುತ್ತಿರುವಂತೆ ಮತ್ತೊಬ್ಬ ಲೋಕಸಭೆಯ ಬೆಂಚುಗಳ ಮೇಲೆ ಹಾರುತ್ತಿರುವುದು ಕಂಡುಬಂದಿದೆ ಎಂದು ಚೌಧರಿ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply