Connect with us

    LATEST NEWS

    ಪೋರ್ಷೆ ಕಾರು ಅಪಘಾತ ಪ್ರಕರಣ – ಅಪ್ರಾಪ್ತ ಬಾಲಕನ ತಂದೆ ಅರೆಸ್ಟ್

    ಪುಣೆ ಮೇ 21: ಪುಣೆಯಲ್ಲಿ ಐಷಾರಾಮಿ ಕಾರು ಪೋರ್ಷೆ ಚಲಾಯಿಸಿ ಇಬ್ಬರನ್ನು ಬಲಿ ಪಡೆದ 17 ವರ್ಷದ ಬಾಲಕನಿಗೆ 15 ಗಂಟೆಗಳಲ್ಲಿ ಜಾಮೀನು ಮಂಜೂರು ಮಾಡಿದಲ್ಲದೇ ಆತನಿಗೆ ನೀಡಿದ ಷರತ್ತುಗಳ ವಿರುದ್ದ ಭಾರೀ ವಿರೋಧ ವ್ಯಕ್ತವಾಗಿದ್ದು, ಇದೀಗ ಪೊಲೀಸರು ಇಬ್ಬರು ಪಬ್ ಮಾಲಕರನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಬಾಲಕನ ತಂದೆಯನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


    ಕಲ್ಯಾಣಿನಗರ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ಪೋರ್ಷೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಸಾಪ್ಟವೇರ್ ಇಂಜಿನಿಯರ್ ಗಳನ್ನು ಬಲಿ ತೆಗೆದುಕೊಂಡಿದ್ದ. ಈ ಘಟನೆ ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಪ್ರಾಪ್ತನಾದ ಹಿನ್ನೆಲೆಯಲ್ಲಿ ಆತನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಯೆರ್ವಾಡದಲ್ಲಿ 15 ದಿನಗಳ ಕಾಲ ಟ್ರಾಫಿಕ್ ಪೊಲೀಸ್ ಜೊತೆ ಕೆಲಸ ಮಾಡಬೇಕು ಮತ್ತು ಅಪಘಾತಗಳಿಗೆ ಸಂಬಂಧಿಸಿದಂತೆ ಪ್ರಬಂಧ ಬರೆಯಬೇಕು, ಮದ್ಯವ್ಯಸನದಿಂದ ಮುಕ್ತನಾಗಲು ಚಿಕಿತ್ಸೆ ಪಡೆಯಬೇಕು, ಆಪ್ತಸಲಹೆ ಪಡೆಯಬೇಕು ಸೂಚನೆಗಳನ್ನು ನೀಡಲಾಗಿದೆ. ರಸ್ತೆ ಅಪಘಾತಗಳ ಕುರಿತು ಪ್ರಬಂಧ ಬರೆಯಲು ಕೇಳಿದಾಗ ಬಾಲ ನ್ಯಾಯ ಮಂಡಳಿಯು ಅದೇ ದಿನ ಯುವಕನಿಗೆ ಜಾಮೀನು ನೀಡಿತ್ತು. ಈ ನಿರ್ಧಾರ ಟೀಕೆಗೆ ಗುರಿಯಾಗಿದೆ. ಆರೋಪಿ ಬಾಲಕ ಪುಣೆಯ ಪ್ರಮುಖ ರೀಟೇಲರ್ ನ ಪುತ್ರನಾಗಿದ್ದಾನೆ.

    ನ್ಯಾಯಾಲಯ ಜಾಮೀನು ನೀಡಿದಲ್ಲದೆ ಇಬ್ಬರು ಸಾವಿಗೂ ಕಾರಣನಾದರೂ ಯಾವುದೇ ಕಠಿಣ ಕ್ರಮಕೈಗೊಳ್ಳದ ಕಾರಣ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆ ಇದೀಗ ಅಪ್ರಾಪ್ತ ಬಾಲಕನ ತಂದೆ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಆರೋಪಿ ಹದಿಹರೆಯದ ತಂದೆಯನ್ನು ಔರಂಗಾಬಾದ್‌ನಲ್ಲಿ ಬಂಧಿಸಲಾಗಿದೆ. ಇನ್ನು ಬಾಲಕನಿಗೆ ಮದ್ಯ ನೀಡಿದ್ದ ಎರಡು ಪಬ್‌ಗಳ ಮ್ಯಾನೇಜರ್ ಮತ್ತು ಮಾಲೀಕರನ್ನು ಬಂಧಿಸಿದ್ದಾರೆ. ಈ ಎರಡು ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಕಾನೂನುಗಳನ್ನು ಉಲ್ಲಂಘಿಸಿ ಅಪ್ರಾಪ್ತರಿಗೆ ಮದ್ಯ ನೀಡಿದ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ.

    ಅಪಘಾತದ ಸಮಯದಲ್ಲಿ ರಿಯಲ್ ಎಸ್ಟೇಟ್ ಡೆವಲಪರ್‌ನ ಮಗನಾದ ಯುವಕ ಕುಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ. ತಾನು ಪಾರ್ಟಿ ಮಾಡಲು ಮತ್ತು ಮದ್ಯಪಾನ ಮಾಡಲು ಹೋಗಿರುವುದು ತಂದೆಗೆ ತಿಳಿದಿತ್ತು ಮತ್ತು ಅವರ ಬಳಿ ಕಾರು ಇತ್ತು ಎಂದು ಆರೋಪಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಬಂಧಿತ ತಂದೆಯನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    Share Information
    Advertisement
    Click to comment

    You must be logged in to post a comment Login

    Leave a Reply