Connect with us

    KARNATAKA

    ಮದುವೆ ಮನೆಯಲ್ಲಿ ಪಾನ್‌ ಸೇವಿಸಿ ಅಸ್ವಸ್ಥಳಾದ ಬಾಲಕಿ : ಬಾಲಕಿ ಹೊಟ್ಟೆಯಲ್ಲಿ ರಂಧ್ರ!

    ಬೆಂಗಳೂರು: ಮದುವೆ ಸಮಾರಂಭದ ಆರತಕ್ಷತೆ ಕಾರ್ಯಕ್ರಮದಲ್ಲಿ “ಲಿಕ್ವಿಡ್‌ ನೈಟ್ರೋಜನ್‌’ನಿಂದ ಕೂಡಿದ ಪಾನ್‌ ಸೇವಿಸಿ, ಆಸ್ಪತ್ರೆಗೆ ದಾಖಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ 12 ವರ್ಷದ ಬಾಲಕಿಯೊಬ್ಬರು ಇತ್ತೀಚೆಗೆ ಸಂಬಂಧಿಕರ ಮದುವೆ ಸಮಾರಂಭದ ಅರತಕ್ಷತೆಗೆ ತೆರಳಿ, ಅಲ್ಲಿ ಊಟದ ಬಳಿಕ ಲಿಕ್ವಿಡ್‌ ನೈಟ್ರೋಜನ್‌ನಿಂದ ಕೂಡಿದ ಪಾನ್‌ ಸೇವಿಸಿದ್ದಾರೆ.

    ಈ ವೇಳೆ ಅನಾರೋಗ್ಯಕ್ಕೆ ಒಳಗಾದ ಬಾಲಕಿಯನ್ನು ಎಚ್‌ಎಸ್‌ಆರ್‌ ಲೇಔಟ್‌ನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಾ. ವಿಜಯ ಎಚ್‌.ಎಸ್‌. ಅವರು ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಲಿಕ್ವಿಡ್‌ ನೈಟ್ರೋಜನ್‌ನಿಂದ ಕೂಡಿದ ಪಾನ್‌ ಸೇವನೆಯಿಂದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವಾಗಿರುವುದು ದೃಢಪಡಿಸಿದ್ದಾರೆ.

    ಈ ವೇಳೆ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ರಂಧ್ರವನ್ನು ಮುಚ್ಚಿದ್ದಾರೆ. ಬಾಲಕಿ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ದೃಢಪಡಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply