Connect with us

    LATEST NEWS

    ಲಕ್ನೋ – ಬಕೆಟ್ ಗೆ ಮೂತ್ರ ಮಾಡಿ ಅದರಿಂದಲೇ ಮನೆ ಸ್ವಚ್ಚಗೊಳಿಸಿದ ಕೆಲಸದಾಕೆ

    ಲಕ್ನೋ ಮೇ 26: ಮನೆಕೆಲಸದಾಕೆಯೊಬ್ಬಳು ಮನೆಯನ್ನು ಸ್ವಚ್ಚಗೊಳಿಸಲು ಬಳಸುವ ನೀರಿಗೆ ಮೂತ್ರ ಮಾಡಿ ಅದರಿಂದಲೇ ಮನೆಯನ್ನು ಸ್ವಚ್ಚಗೊಳಿಸಿದ ಘಟನೆ ಉತ್ತರಪ್ರದೇಶದ ಗ್ರೇಟರ್ ನೊಯ್ಡಾದ ಅಜ್‍ನಾರ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ. ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.


    ಪ್ರಕರಣ ಸಂಬಂಧ ಮನೆಯ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸಬೀನಾ, ಮೊದಲು ಮಾಲೀಕರ ಆರೋಪಗಳನ್ನು ನಿರಾಕರಿಸಿದ್ದು ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ. ಆದರೆ ಯಾಕೆ ಈ ರೀತಿ ಮಾಡಿರುವುದು ಎಂಬುದರ ಬಗ್ಗೆ ಬಾಯ್ಬಿಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
    ಮನೆ ಕೆಲಸದಾಕೆ ಸಬೀನಾ ಕಟುನ್ ನೆಲ ಒರೆಸುವ ವೇಳೆ ಬಕೆಟ್‍ನಲ್ಲಿದ್ದ ನೀರಿಗೆ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply