ಪುತ್ತೂರು, ಮೇ 26: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಯುವಕನ ವಿರುದ್ಧ ನಡೆದಿದ್ದ ಗೂಂಡಾಗಿರಿಯನ್ನು ಶಾಸಕ ಅಶೋಕ್ ರೈ ಸಮರ್ಥಿಸಿಕೊಂಡಿದ್ದಾರೆ.
ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಅಮಾಯಕರ ಮೇಲೆ ದೌರ್ಜನ್ಯ ನಡೆದಿತ್ತು, ಬಿಜೆಪಿಯವರೇ ಪೋಲೀಸರಿಗೆ ಒತ್ತಡ ಹೇರಿ ಯುವಕರಿಗೆ ಹೊಡಿಸಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು,ಈ ವಿಚಾರವಾಗಿ ಒತ್ತಡ ಹೇರಿದವರ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದೆ, ಅಧಿಕೃತವಾಗಿ ದಾಖಲೆ ದೊರೆತರೆ ಅಗತ್ಯ ಬಿದ್ದರೆ ಸಮಾಜದ ಮುಂದೆ ಇಡುವೆ.
ಅದೇ ವಿಚಾರಕ್ಕೆ ನನ್ನ ಅಪ್ಪ-ಅಮ್ಮನ ಬಗ್ಗೆ ಅವಹೇಳನಕಾರಿ ಪೋಸ್ಟ್ ಅನ್ನು ಸುಳ್ಯದ ಯುವಕ ಹಾಕಿದ್ದ, ನಾನು ತಪ್ಪು ಮಾಡಿದರೆ ಹೇಳಲಿ, ಅದನ್ನು ತಿದ್ದುವ ಪ್ರಯತ್ನ ಮಾಡುತ್ತೇನೆ. ಅದು ಬಿಟ್ಟು ನನ್ನ ಅಪ್ಪ-ಅಮ್ಮನ ಬಗ್ಗೆ ಪೋಸ್ಟ್ ಮಾಡಲಾಗಿದೆ. ಅದನ್ನು ನನ್ನ ಅಭಿಮಾನಿಗಳು ಹೋಗಿ ಪ್ರಶ್ನಿಸಿದ್ದಾರೆ, ಸಮಾಜದಲ್ಲಿ ಇಂಥ ಪ್ರಶ್ನೆ ಮಾಡುವ ವಿಚಾರ ಆಗಬೇಕು, ನನ್ನ ಗಮನಕ್ಕೆ ಆ ವಿಚಾರ ಬಂದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.



